ಶನಿವಾರ, ಮೇ 15, 2021
23 °C

ಚೆಸ್: ವಿಷ್ಣು ಪ್ರಸನ್ನ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಲ್ಬೇನಾ, ಬಲ್ಗೇರಿಯಾ (ಪಿಟಿಐ): ಭಾರತದ ಭರವಸೆಯ ಆಟಗಾರ ವಿಷ್ಣು ಪ್ರಸನ್ನ ಅವರು ಇಲ್ಲಿ ನಡೆಯುತ್ತಿರುವ ಗ್ರ್ಯಾಂಡ್ ಯೂರೊಪ್ ಅಲ್ಬೇನಾ ಅಂತರರಾಷ್ಟ್ರೀಯ ಚೆಸ್ ಟೂರ್ನಿಯಲ್ಲಿ ಹಿನ್ನಡೆ ಅನುಭವಿಸಿದ್ದಾರೆ.ಆರನೇ ಸುತ್ತಿನಲ್ಲಿ ಪ್ರಸನ್ನ ಅವರು ಅರ್ಮೆನಿಯಾದ ಹ್ರಾಂಟ್ ಮೆಲ್ಕುಮ್‌ಯಾನ್ ವಿರುದ್ಧ ಪರಾಭವಗೊಂಡರು.ಈ ಟೂರ್ನಿಯಲ್ಲಿ ಈಗಾಗಲೇ ಗ್ರ್ಯಾಂಡ್ ಮಾಸ್ಟರ್ ಪದವಿಗೆ ಅರ್ಹತೆ ಪಡೆದಿರುವ ಪ್ರಸನ್ನ, ಈ ಸೋಲಿನಿಂದ ಅಗ್ರಸ್ಥಾನ ಕಳೆದುಕೊಂಡಿದ್ದಾರೆ (4.5 ಪಾಯಿಂಟ್ಸ್).ದಿನದ ಇತರೆ ಪಂದ್ಯಗಳಲ್ಲಿ ಭಾರತ ಮಿಶ್ರ ಪ್ರದರ್ಶನ ತೋರಿದೆ. ಗೆಲುವಿನ ಅವಕಾಶ ತಪ್ಪಿಸಿಕೊಂಡ ಅಭಿಜಿತ್ ಗುಪ್ತಾ, ರಷ್ಯಾದ ಅಲೆಕ್ಸೆಜ್ ಗೊರ್ಬಾಟೊವ್ ವಿರುದ್ಧ ಹೋರಾಟ ನಡೆಸಿ ಡ್ರಾ ಮಾಡಿಕೊಂಡರು. ಅರ್ಮೆನಿಯಾದ ಅವೆತಿಕ್ ಗ್ರಿಗೊರ್ಯಾನ್ ವಿರುದ್ಧ ಅಶ್ವಿನ್ ಜಯರಾಮ್ ಸಹ ಅದೇ ಹಾದಿಯಲ್ಲಿ ನಡೆದರು.ಆದರೆ ಬಲ್ಗೇರಿಯಾದ ಪೀಟರ್ ಅರ್ನೌಡೊವ್ ಅವರನ್ನು ಮಣಿಸಿದ ಅನುರಾಗ್ ಮಹಮಲ್, ಉತ್ತಮ ಫಲಿತಾಂಶ ಪಡೆದರು. ಉತ್ತಮ ಆಟವಾಡಿದ ಸಾಗರ್ ಷಾ, ರುಮೇನಿಯಾದ ಕಾನಸ್ಟಂಟಿನ್ ಲುಪುಲೆಸ್ಕು ಜೊತೆಗೆ ಪಾಯಿಂಟ್ಸ್ ಹಂಚಿಕೊಂಡರು.ಸ್ವಪ್ನಿಲ್ ಧೋಪಡೆ ಅವರ ಆಟದಲ್ಲಿ ಚೇತರಿಕೆ ಕಂಡು ಬಂದಿದ್ದು, ಬೆಲಾರಸ್‌ನ ನಾಸ್ಟಾಸ್ಸಿಯಾ ವಿರುದ್ಧ ಜಯ ದಾಖಲಿಸಿದ್ದಾರೆ.

ಅಂತಿಮ ಸುತ್ತಿಗೆ ಕೇವಲ ಮೂರು ಸುತ್ತುಗಳು ಬಾಕಿ ಉಳಿದಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.