ಚೆಸ್: ಶಶಿಕಿರಣ್‌ಗೆ ಸೋಲು

7

ಚೆಸ್: ಶಶಿಕಿರಣ್‌ಗೆ ಸೋಲು

Published:
Updated:

ಮಾಸ್ಕೊ (ಪಿಟಿಐ): ಗ್ರ್ಯಾಂಡ್‌ಮಾಸ್ಟರ್ ಕೃಷ್ಣನ್ ಶಶಿಕಿರಣ್ ಇಲ್ಲಿ ನಡೆಯುತ್ತಿರುವ ಏರೊಫ್ಲಾಟ್ ಇಂಟರ್‌ನ್ಯಾಷನಲ್ ಓಪನ್ ಚೆಸ್ ಟೂರ್ನಿಯ ಆರನೇ ಸುತ್ತಿನ ಪಂದ್ಯದಲ್ಲಿ ಪೋಲೆಂಡ್‌ನ ಮಟೆಯಸ್ ಬಾರ್ಟೆಲ್ ಎದುರು ಪರಾಭವಗೊಂಡರು.ಸೋಲು ಅನುಭವಿಸಿದ ಕಾರಣ ಶಶಿಕಿರಣ್ ಪ್ರಶಸ್ತಿಯ ಹಾದಿ ಇನ್ನಷ್ಟು ಕಠಿಣವೆನಿಸಿದೆ. ಭಾರತದ ಆಟಗಾರನ ಬಳಿ ಇದೀಗ 3.5 ಪಾಯಿಂಟ್‌ಗಳಿವೆ. `ಎ~ ಗುಂಪಿನಲ್ಲಿ ಆಡುತ್ತಿರುವ ಭಾರತದ ಎಲ್ಲ ಸ್ಪರ್ಧಿಗಳೂ ಆರನೇ ಸುತ್ತಿನಲ್ಲಿ ನಿರಾಸೆ ಅನುಭವಿಸಿದರು.ಅಭಿಜಿತ್ ಗುಪ್ತಾ ಅವರು ಉಕ್ರೇನ್‌ನ ಪವೆಲ್ ಎಜನೋವ್ ಎದುರೂ, ಪರಿಮಾರ್ಜನ್ ನೇಗಿ ರಷ್ಯಾದ ವ್ಲಾದಿಮಿರ್ ಫೆಡೊಸೀವ್ ಕೈಯಲ್ಲೂ ಸೋಲು ಅನುಭವಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry