ಶುಕ್ರವಾರ, ಮೇ 27, 2022
21 °C

ಚೆಸ್: ಶಾಬ್ದಿಕ್ ವರ್ಮಾಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಧರ್ಮಸ್ಥಳದ ಶಾಬ್ದಿಕ್ ವರ್ಮಾ ಭಾನುವಾರ ಇಲ್ಲಿಯ ಕಾವೇರಿ ಶಾಲೆಯಲ್ಲಿ ಮುಕ್ತಾಯವಾದ 15 ವರ್ಷದೊಳಗಿನ ಬಾಲಕರ ರಾಜ್ಯಮಟ್ಟದ ಚೆಸ್ ಟೂರ್ನಿಯ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.ಮೈಸೂರು ಜಿಲ್ಲಾ ಚೆಸ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಟೂರ್ನಿಯ ಅಂತಿಮ ಸುತ್ತಿನ ಪಂದ್ಯದಲ್ಲಿ ಶಾಬ್ದಿಕ್ ವರ್ಮಾ ಅವರು ಬೆಂಗಳೂರಿನ ಓಜಸ್ ಕುಲಕರ್ಣಿ ವಿರುದ್ಧ ಗೆದ್ದರು.ಇನ್ನೊಂದು ಪಂದ್ಯದಲ್ಲಿ ಮಂಗಳೂರಿನ ಅರ್ಜುನ್ ಆದಪ್ಪ ಅವರು ಶಾಶ್ವತ್ ಮುದನಗುಡಿ ವಿರುದ್ಧ ಜಯಿಸಿದರು. ಇದರೊಂದಿಗೆ ಆರೂವರೆ ಅಂಕ ಗಳಿಸಿ ದ್ವಿತೀಯರಾದರು. ಆರೂವರೆ ಅಂಕ ಗಳಿಸಿದ ಇನ್ನೊಬ್ಬ ಆಟಗಾರ ಬೆಂಗಳೂರಿನ ಆರ್. ಪಾರ್ಥಸಾರಥಿ ಮತ್ತು ಓಜಸ್ ಕುಲಕರ್ಣಿ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.