ಚೇಂಬರ್ ಸ್ವಚ್ಛಗೊಳಿಸಿ

7

ಚೇಂಬರ್ ಸ್ವಚ್ಛಗೊಳಿಸಿ

Published:
Updated:

ವಾರ್ಡ್ ನಂ. 71ನೇ ಈಜಿಪುರದ ಮುಖ್ಯ ರಸ್ತೆ (ಸ್ನೇಹ ಬೇಕರಿ ಪಕ್ಕ) 1ನೇ ಕ್ರಾಸ್‌ನಲ್ಲಿ ಸುಮಾರು ಹತ್ತು-ಹದಿನೈದು ದಿನಗಳಿಂದ ಒಳಚರಂಡಿ ಚೇಂಬರ್ ಕಟ್ಟಿಕೊಂಡು ಹೊಲಸು ನೀರು ರಸ್ತೆಯಲ್ಲೆಲ್ಲಾ ಹರಿಯುತ್ತಿದೆ. ಈ ಬಡಾವಣೆಯ ಮನೆಗಳ ಮುಂದೆಲ್ಲಾ ಈ ತ್ಯಾಜ್ಯನೀರಿನ ಕಿರಿಕಿರಿ, ದುರ್ನಾತ.ಇಲ್ಲಿನ ಒಳಚರಂಡಿ ಪೈಪುಗಳ ವ್ಯಾಸವು ಚಿಕ್ಕದಾಗಿದ್ದು ತುಂಬಾ ಹಳೆಯದಾಗಿದೆ, ಆದುದರಿಂದ ತ್ಯಾಜ್ಯ  ನೀರು ಸರಾಗವಾಗಿ ಹರಿಯದೆ ಆಗಾಗ ಕಟ್ಟಿಕೊಳ್ಳುತ್ತದೆ. ಈ ರಸ್ತೆಗೆ ದೊಡ್ಡ ಪೈಪುಗಳನ್ನು ಅಳವಡಿಸಬೇಕೆಂದು ಈ ಹಿಂದೆ ಜಲಮಂಡಳಿಗೆ ಮನವಿಯನ್ನೂ ಸಲ್ಲಿಸಲಾಗಿತ್ತು. ಆದರೆ, ಮಂಡಳಿ ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಈಗಲೂ ಚೇಂಬರ್ ಕಟ್ಟಿಕೊಂಡಿರುವ ಬಗ್ಗೆ ಸಂಬಂಧಿಸಿದ ಕಚೇರಿಗೆ ದೂರು ನೀಡಲಾಗಿದೆ. ಆದರೆ ಯಾರೂ ಗಮನ ಹರಿಸಿಲ್ಲ. ಈಗಲಾದರೂ ವಿಳಂಬ ಮಾಡದೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಬಂದು ಪರಿಶೀಲಿಸಿ ತೊಂದರೆ ನಿವಾರಿಸಬೇಕೆಂದು ಮನವಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry