ಚೇತನ್‌, ಮೇಘನಾ ‘ಶ್ರೇಷ್ಠ ಅಥ್ಲೀಟ್‌’

7
ಬೆಂಗಳೂರು ವಿವಿ ಅಂತರ ಕಾಲೇಜ್‌ ಅಥ್ಲೆಟಿಕ್ಸ್‌

ಚೇತನ್‌, ಮೇಘನಾ ‘ಶ್ರೇಷ್ಠ ಅಥ್ಲೀಟ್‌’

Published:
Updated:

ಬೆಂಗಳೂರು: ಕೆ.ಆರ್‌.ಪುರಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನ ಬಿ.ಚೇತನ್‌ ಹಾಗೂ ಸೇಂಟ್‌ ಜೋಸೆಫ್ಸ್‌ ಕಾಮರ್ಸ್‌ ಕಾಲೇಜ್‌ನ ಮೇಘನಾ ಶೆಟ್ಟಿ  ಅವರು  ಶನಿವಾರ ಇಲ್ಲಿ ಕೊನೆಗೊಂಡ ಬೆಂಗಳೂರು ವಿಶ್ವವಿದ್ಯಾಲಯದ ಅಂತರ ಕಾಲೇಜ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ ಷಿಪ್‌ನಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಅತ್ಯುತ್ತಮ ಅಥ್ಲೀಟ್‌ ಎನಿಸಿದರು.ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕೂಟದಲ್ಲಿ ಅಲ್‌ ಅಮೀನ್‌ ಕಾಲೇಜ್‌ ತಂಡದವರು ಪುರುಷರ ವಿಭಾಗದಲ್ಲಿ (113 ಪಾಯಿಂಟ್ಸ್‌) ಚಾಂಪಿಯನ್‌ ಆದರು. ಮಹಿಳೆಯರ ವಿಭಾಗದಲ್ಲಿ ಸೌತ್‌ ಈಸ್ಟ್‌ ಏಷ್ಯನ್‌ ಕಾಲೇಜ್‌ (48 ಪಾಯಿಂಟ್‌) ಈ ಗೌರವ ಪಡೆಯಿತು.ಅಂತಿಮ ದಿನದ ಸ್ಪರ್ಧೆಯ ಐದು ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಶೇಷಾದ್ರಿಪುರಂ ಅಕಾಡೆಮಿ ಆಫ್‌ ಬ್ಯುಸಿನೆಸ್‌ ಸ್ಟಡೀಸ್‌ ಕಾಲೇಜ್‌ನ ಎಸ್‌.ಆರ್‌.ಪ್ರತೀಕಾ ನೂತನ ದಾಖಲೆ ನಿರ್ಮಿಸಿದರು. ಅವರು ಈ ದೂರ ಸಾಗಲು 29 ನಿಮಿಷ 17.4 ಸೆಕೆಂಡ್‌ ತೆಗೆದುಕೊಂಡರು. ಹೋದ ವರ್ಷ ಕೆ.ಆರ್‌.ಪುರಂನ ಎಸ್‌ಇಎ ಕಾಲೇಜ್‌ನ ಆರ್‌. ಮಂಜುಳಾ (35:32.1 ಸೆ.) ನಿರ್ಮಿಸಿದ್ದ ದಾಖಲೆಯನ್ನು ಪ್ರತೀಕಾ ಅಳಿಸಿ ಹಾಕಿದರು. ಈ ಬಾರಿ ಮಂಜುಳಾ ಎರಡನೇ ಸ್ಥಾನ ಪಡೆದರು.400 ಮೀ. ಹರ್ಡಲ್ಸ್‌ನಲ್ಲಿ ಸುರಾನ ಕಾಲೇಜ್‌ನ ಎಂ.ಅರ್ಪಿತಾ (1:4.8 ಸೆ.) ಮೊದಲ ಸ್ಥಾನ ಗಳಿಸಿದರು. ಹೆಪ್ಟಾಥ್ಲಾ ನ್‌ನಲ್ಲಿ ಜ್ಯೋತಿ ನಿವಾಸ್‌ ಕಾಲೇಜ್‌ನ ಪೂಜಾ ಪ್ರಸಾದ್‌ ಅಗ್ರಸ್ಥಾನ ಪಡೆದರು.ಪುರುಷರ 400 ಮೀ. ಹರ್ಡಲ್ಸ್‌ ನಲ್ಲಿ ಅಲ್‌ ಅಮೀನ್‌ ಕಾಲೇಜ್‌ನ ಎ.ಕೆ.ರಘು (57.9 ಸೆ.) ಮೊದಲನೆಯವರಾಗಿ ಗುರಿ ಮುಟ್ಟಿದರು. ಹಾಫ್‌ ಮ್ಯಾರಥಾನ್‌ನಲ್ಲಿ ಆರ್‌.ವಿ.ರಸ್ತೆಯ ವಿಜಯ ಕಾಲೇಜ್‌ನ ಹೇಮಚಂದ್ರ (1:18:59.5 ಸೆ.) ಅಗ್ರಸ್ಥಾನ ಗಳಿಸಿದರು. 20 ಕಿ.ಮೀ. ನಡಿಗೆಯಲ್ಲಿ ಕೆ.ಆರ್‌.ಪುರಂನ ಎಸ್‌ಇಎ ಕಾಲೇಜ್‌ನ  ರಂಜಿತ್‌ ಜೋ (2:2:8.0 ಸೆ.) ಮೊದಲ ಸ್ಥಾನ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry