ಸೋಮವಾರ, ಮೇ 17, 2021
22 °C

ಚೇಳ್ಳಗುರ್ಕಿಯಲ್ಲಿ ಶಿಕ್ಷಕರಿಗೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಒಂದು ದೀಪದಿಂದ ಅನೇಕ ದೀಪಗಳನ್ನು ಬೆಳಗಿಸಿದಂತೆಯೇ, ಒಬ್ಬ ಶಿಕ್ಷಕ ಅನೇಕ ನಾಗರೀಕರನ್ನು ರೂಪಿಸು ವಲ್ಲಿ ಮಹತ್ವದ ಪಾತ್ರ ವಹಿಸುತ್ತಾನೆ ಎಂದು ಉರುವಕೊಂಡ ಗವಿಮಠದ ಚೆನ್ನಬಸವ ರಾಜೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.ತಾಲ್ಲೂಕಿನ ಚೇಳ್ಳಗುರ್ಕಿಯಲ್ಲಿ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆಯ ಜಿಲ್ಲಾ ಘಟಕ ಇತ್ತೀಚೆಗೆ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ಶಿಕ್ಷಕನ ಪಾತ್ರ ಬಹುಮುಖ್ಯ. ಹಿಂದೆ ಗುರು,  ಮುಂದೆ ಗುರಿ ಇರಿಸಿಕೊಂಡು ಸಾಗಿದರೆ ವಿದ್ಯಾರ್ಥಿಯ ಜೀವನ ಉಜ್ವಲವಾಗುವುದರಲ್ಲಿ ಸಂದೇಹವಿಲ್ಲ ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ ಟಿಎಚ್‌ಎಂ ಬಸವರಾಜ್, ಸನ್ಮಾನ  ವ್ಯಕ್ತಿಗೆ ಮಾಡುವಂಥದ್ದಲ್ಲ. ಅವರ ವ್ಯಕ್ತಿತ್ವಕ್ಕೆ ಮಾಡುವಂಥದ್ದು ಎಂದರು.ಸಿ.ಹನುಮಂತಪ್ಪ, ಎಚ್. ಧನಾಲು, ಕೆ ಬಸವಣಪ್ಪ, ಜಿ ಹುಲುಗಪ್ಪ, ಟಿ.ಓಬಳೇಶಪ್ಪ, ಎಸ್.ಮಲ್ಲೇಶಪ್ಪ, ಕೆ.ಎಂ. ರವಿ ಪ್ರಸಾದ್, ಎಚ್.ಎಂ. ಬಸವಣ್ಣೆಮ್ಮ, ಎಚ್.ಎಂ. ಕೊಟ್ರಯ್ಯ, ಎಂ. ಗದ್ದಿಕೇರಿ ಅವರನ್ನು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕೆ ಚಂದ್ರಶೇಖರ್, ಎಂ.ಟಿ. ಮಲ್ಲೇಶ್, ಮೆಹತಾಬ್, ಹನುಮಂತಪ್ಪ, ಪಿಎಸ್‌ಐ ಫಿರೋಜ್ ಅಹಮ್ಮದ್ ಹಾಜರಿದ್ದರು. ರವಿ ಚೇಳ್ಳ ಗುರ್ಕಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಚಾ.ಮ. ಗಂಗಾಧರಯ್ಯ ಸ್ವಾಗತಿಸಿದರು. ಸದಾಶಿವಪ್ಪ ನಿರೂಪಿಸಿ ದರು. ಕಾಶಿನಾಥಯ್ಯ ವಂದಿಸಿದರು.ಧರಣಿ ಮುಂದುವರಿಕೆ

ಕೆನರಾ ಬ್ಯಾಂಕ್ ನೌಕರರಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ತಮಗೂ ನೀಡುವಂತೆ ಒತ್ತಾಯಿಸಿ ಪ್ರಗತಿ ಗ್ರಾಮೀಣ ಬ್ಯಾಂಕ್ ನೌಕರರ ಮತ್ತು ಅಧಿಕಾರಿಗಳ ಸಂಘಗಳ ಜಂಟಿ ವೇದಿಕೆ ಆರಂಭಿಸಿರುವ ಧರಣಿ 2ನೇ ದಿನಕ್ಕೆ ಕಾಲಿರಿಸಿದೆ.ಬ್ಯಾಂಕ್‌ನ ಪ್ರಧಾನ ಕಚೇರಿ ಎದುರು ಗುರುವಾರ ನಡೆದ ಧರಣಿಯಲ್ಲಿ ಕೊಪ್ಪಳ ಹಾಗೂ ಕೋಲಾರ ಜಿಲ್ಲೆಯ 30ಕ್ಕೂ ಹೆಚ್ಚು ಸಿಬ್ಬಂದಿ ಪಾಲ್ಗೊಂಡಿದ್ದರು.ಪ್ರಗತಿ ಗ್ರಾಮೀಣ ಬ್ಯಾಂಕ್ ನೌಕರರ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ರವಿ ದೇಸಾಯಿ, ಕೊಪ್ಪಳ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಪ್ರಭಾಕರ್, ವಿದ್ಯಾ ತೀರ್ಥ, ಅಧಿಕಾರಿಗಳ ಸಂಘದ ಕೋಶಾ ಧಿಕಾರಿ ರಮಾನಂದ, ಕಾರ್ಯದರ್ಶಿ ಚಂದ್ರಶೇಖರ್, ಪ್ರಭುದೇವ, ಮಲ್ಲರ ಭಟ್ ಜೋಶಿ ನೇತೃತ್ವ ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.