ಚೌಡಯ್ಯನ ಐಕ್ಯಮಂಟಪ ನೀರಿನಲ್ಲಿ

ಶುಕ್ರವಾರ, ಜೂಲೈ 19, 2019
26 °C

ಚೌಡಯ್ಯನ ಐಕ್ಯಮಂಟಪ ನೀರಿನಲ್ಲಿ

Published:
Updated:

ರಾಣೆಬೆನ್ನೂರು: ಕಳೆದ ಎರಡು ಮೂರು ದಿನಗಳಿಂದ ಸುರಿದ ಭಾರಿ ಮಳೆಗೆ ತುಂಗಭದ್ರಾ ನದಿ ನೀರಿನ ಹರವು ಹೆಚ್ಚುತ್ತಿದೆ.ನದಿ ದಡಲ್ಲಿರುವ ತಾಲ್ಲೂಕಿನ ಚೌಡಯ್ಯದಾನಪುರ ಗ್ರಾಮದ ಶರಣ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪವು ತುಂಗಭದ್ರಾ ನದಿಯ ನೀರಿನ ಪ್ರಮಾಣವು ಹೆಚ್ಚಾಗಿರುವು ದರಿಂದ ಮುಳುಗುವ ಹಂತ ತಲುಪಿದೆ.ಸರ್ಕಾರವು ಈ ವಚನಕಾರನ ಐಕ್ಯಮಂಟಪದ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಖೇದಕರ ಸಂಗತಿ. ಐಕ್ಯಮಂಟಪದ ಅಭಿವೃದ್ಧಿಗಾಗಿ ಗ್ರಾಮದ ಜನತೆ ಸರ್ಕಾರಕ್ಕೆ ಅನೇಕ ಬಾರಿ ಗಮನ ತಂದರೂ ಏನೂ ಪ್ರಯೋಜನವಾಗಿಲ್ಲ ಎಂದು ಗ್ರಾಮದ ವೀರಭದ್ರಪ್ಪ ದೀಪಾವಳಿ ತಿಳಿಸಿದ್ದಾರೆ.ಪ್ರತಿ ವರ್ಷ ನದಿಯ ನೀರಿನ ಪ್ರಮಾಣ ಹೆಚ್ಚಾದ ಕೂಡಲೇ ಈ ಐಕ್ಯಮಂಟಪವು ನೀರಿನಲ್ಲಿ ಸಂಪೂರ್ಣವಾಗಿ ಮುಳುಗಡೆ ಆಗುತ್ತದೆ. ಆದ್ದರಿಂದ ಈ ಐಕ್ಯ ಮಂಟಪವನ್ನು ಕೂಡಲಸಂಗಮದ ಮಾದರಿಯಲ್ಲಿ ಎತ್ತರ ಪ್ರಮಾಣ ದಲ್ಲಿ ನಿರ್ಮಾಣ ಆಗಬೇಕಿದೆ ಎಂದು ಒತ್ತಾಯಿಸಿದ್ದಾರೆ.ಸರ್ಕಾರ ಜಿಲ್ಲೆಯ ಅನೇಕ ಶರಣರ ಪ್ರಾಧಿಕಾರ ರಚನೆ ಹಾಗೂ ಅಭಿವೃದ್ಧಿಯನ್ನು ಕೈಗೊಂಡಿದೆ. ಅವುಗಳಂತೆ ಇಲ್ಲಿಯ ಐಕ್ಯ ಮಂಟಪದ ಪ್ರಾಧಿಕಾರ ರಚನೆಗೆ ಮುಂದಾಗಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry