ಶುಕ್ರವಾರ, ಜೂನ್ 25, 2021
30 °C

ಚೌಡೇಶ್ವರಿ ದೇವಾಲಯ: ರಥೋತ್ಸವ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳ್ಳೇಗಾಲ: ಪಟ್ಟಣದ ರಾಮಲಿಂಗ ಚೌಡೇಶ್ವರಿ ದೇವಾಲಯದಲ್ಲಿ ಮಾರ್ಚ್ 24ರಿಂದ ಏಪ್ರಿಲ್‌ 3ರವರೆಗೆ ಚಂದ್ರಶೇಖರಸ್ವಾಮಿ ಸಮೇತ ಗಿರಿಜಾದೇವಿ ಕಲ್ಯಾಣ ಮಹೋತ್ಸವ ಹಾಗೂ ಬ್ರಹ್ಮರಥೋತ್ಸವ ನಡೆಯಲಿದೆ.11ದಿನಗಳ ಕಾಲ ದೇವಾಲಯದಲ್ಲಿ ನಡೆಯುವ ಉತ್ಸವ ಮತ್ತು ಪೂಜಾ ಕಾರ್ಯಕ್ರಮಗಳಿಗೆ ದೇವಾಲಯ ಸಜ್ಜುಗೊಳ್ಳುತ್ತಿದೆ.

ಪಟ್ಟಣದ ದೇವಾಂಗ ಮಹಾಸಭಾ ವತಿಯಿಂದ ಮಾರಿಗುಡಿ ಬೀದಿ ಸದಸ್ಯರು ಶೆಟ್ಟಿಗಾರರು, ಯಜಮಾನರು ಕಾರ್ಯಕರ್ತರು ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಮುಂದಾಗಿದ್ದಾರೆ.ದೇವಾಂಗಪೇಟೆ, ಮಾರಿಗುಡಿ ಬೀದಿ, ಸಂತೆ ಪೇಟೆ, ಚೌಡೇಶ್ವರಿ ಗುಡಿ ಬೀದಿ ಸೇರಿದಂತೆ ಇತರೆ ಬೀದಿಗಳನ್ನು ತಳಿರುತೋರಣ ಹಾಗೂ ವರ್ಣಮಯ ವಿದ್ಯುತ್‌ ದೀಪಗಳಿಂದ ಸಿಂಗರಿಸಿ ಸಜ್ಜುಗೊಳಿಸಲಾಗುತ್ತಿದೆ. 11 ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ವಿವಿಧ ಬೆಂಗಳೂರು, ಮೈಸೂರು ಸೇರಿದಂತೆ ವಿವಿಧೆಡೆಗಳಿಂದ ಭಕ್ತರು ಬರಲಿದ್ದಾರೆ.ಮಾರ್ಚ್ 24ರಂದು ರಾತ್ರಿ ದೇವಾಲಯದಲ್ಲಿ ಅಂಕುರಾರ್ಪಣೆ, ಧ್ವಜ ಸಮರ್ಪಣೆ, ಮಾರ್ಚ್ 25ರಂದು ಬೆಳಿಗ್ಗೆ ವೃಷಭಯಾಗ, ಧ್ವಜಾರೋಹಣ, ರಾತ್ರಿ ಭೇರಿತಾಡನ, ದೇವತಾಹ್ವಾನ, ರಕ್ಷಾಬಂಧನ, ಸಿಂಹವಾಹನೋತ್ಸವ,ಮಾರ್ಚ್ 26ರಂದು ಬೆಳಿಗ್ಗೆ ರುದ್ರಾಭಿಷೇಕ, ಶಿವಯಾಗ ಪೂಜಾ, ಉತ್ಸವ, ರಾತ್ರಿ ಶಿವಯಾಗ ಪೂಜಾ, ಬಲಿ ಪ್ರಧಾನ, ಚಂದ್ರಮಂಡಲೋತ್ಸವ, ಮಾ.27ರಂದು ರಾತ್ರಿ ಶಿವಯಾಗ ಪೂಜಾ ಬಲಿಪ್ರಧಾನ ಶೇಷವಾಹನೋತ್ಸವ, ಮಾ.28ರಂದು  ರಾತ್ರಿ ಪುಷ್ಪ ಮಂಟಪೋತ್ಸವ, ಮಾರ್ಚ್ 29ರಂದು ಮಧ್ಯಾಹ್ನ ಅಡ್ಡಪಲ್ಲಕ್ಕಿ ಉತ್ಸವ ಸಂಜೆ ಕಾಶಿಯಾತ್ರಾ ಉತ್ಸವ, ಮಾರ್ಚ್ 30ರಂದು ರಾತ್ರಿ ವಸಂತಭೇರಿ ಪೂಜೆ, ಗಜಾರೋಹ ಣೋತ್ಸವ, ಮಾರ್ಚ್ 31ರಂದು ಬೆಳಿಗ್ಗೆ 9–25ರಿಂದ 10–15 ಘಂಟೆಗೆ ದಿವ್ಯ ಬ್ರಹ್ಮ ರಥೋತ್ಸವ ನಡೆಯಲಿದೆ.ರಾತ್ರಿ ಹಂಸವಾಹನೋತ್ಸವ ಮತ್ತು ನಟರಾಜಸ್ವಾಮಿ ಉತ್ಸವ. ಏ.1ರಂದು ರಾತ್ರಿ ಗಾರೆ ಬಸವ ಮಂಟಪೋತ್ಸವ, ಶಯನೋತ್ಸವ, ಡೋಲೋತ್ಸವ. ಏ. 2ರಂದು ಬೆಳಿಗ್ಗೆ ಅಶ್ವವಾಹನೋತ್ಸವ, ಪಾರ್ವತಿ ಪ್ರಣಯಕಲಹ, ಸಂಧಾನ ಸೇವೆ, ಚೂರ್ಣೋತ್ಸವ ಪೂರ್ವಕ, ಕಾವೇರಿ ನದಿ ತೀರದಲ್ಲಿ ತೀರ್ಥಸ್ನಾನ. ರಾತ್ರಿ ಶಿವಯಾಗ ಪೂಜಾ, ದೇವತೋದ್ವಾಸನ ಉತ್ಸವ, ಧ್ವಜಾ ರೋಹಣ, ಮೌನಬಲಿ, ಏ.3ರಂದು ಬೆಳಿಗ್ಗೆ ಪೂರ್ಣಾಹುತಿ, ಮಹಾಭಿಷೇಕ, ರಾತ್ರಿ ದ್ವಾದಶ ಆರಾಧನಾ ಮೆರವಣಿಗೆಯೊಂದಿಗೆ ಹಬ್ಬಕ್ಕೆ ತೆರೆಬೀಳಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.