ಬುಧವಾರ, ನವೆಂಬರ್ 13, 2019
23 °C

ಚೌಳಿ ಮಠದ ನಿಗೂಢತೆ ಏನು?

Published:
Updated:

ಬೀದರ್ ನಗರದ ಹೊರ ವಲಯದಲ್ಲಿರುವ ಚೌಳಿ ಮಠದ ಹಿರಿಯ ಸ್ವಾಮೀಜಿ ಗಣೇಶ್ವರ ಅವಧೂತರ ನಿಗೂಢ ಸಾವಿನ ಫೆ. 28ನಂತರ ಈಗ ಅವರ ಮೂವರು ಶಿಷ್ಯರು ಕಟ್ಟಿಗೆಯ ಪ್ರಬಂಧಕ್ಕೆ (ರಾಶಿ) ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಸಂಶಯ, ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಇಡೀ ದೇಶದ ಧಾರ್ಮಿಕ ಇತಿಹಾಸದಲ್ಲೇ ಕಂಡರಿಯದ ಈ ಘಟನೆ ಭಕ್ತ ಸಮೂಹವನ್ನು ತಲ್ಲಣಗೊಳಿಸಿದೆ.ಕಿರಿಯ ಸ್ವಾಮೀಜಿ ಮಾರುತಿಯವರ ನಾಪತ್ತೆ. ಹಿರಿಯ ಶ್ರೀಗಳ ನಿಗೂಢ ಸಾವು. ಈಗ ಮೂವರು ಕಿರಿಯ ಸ್ವಾಮಿಗಳ ಆತ್ಮಾಹುತಿ (ಆತ್ಮಹತ್ಯೆ?). ಈ ಮೂರು ಪ್ರಕರಣಗಳನ್ನು ಭೇದಿಸಲು ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ.

ಮಾರುತಿ ಸ್ವಾಮೀಜಿ ನಾಪತ್ತೆಯಾಗಿ ಒಂದು ತಿಂಗಳಾದರೂ ಎಚ್ಚೆತ್ತುಕೊಳ್ಳದ ಅಲ್ಲಿನ ಪೊಲೀಸ್ ಇಲಾಖೆ, ಹಿರಿಯ ಸ್ವಾಮೀಜಿಯ ನಿಗೂಢ ಸಾವಿಗೆ ಕಾರಣ ಕಂಡು ಹಿಡಿಯಲು ಕೂಡಾ ವಿಫಲವಾಗಿದೆ.

- ರತಿಕಾಂತ. ಎಂ. ನೆಳಗೆ ,ಬೀದರ್.

ಪ್ರತಿಕ್ರಿಯಿಸಿ (+)