ಶುಕ್ರವಾರ, ನವೆಂಬರ್ 15, 2019
22 °C

ಚೌಳಿ ಮಠ: ಮೂವರು ಕಿರಿಯ ಸ್ವಾಮೀಜಿಗಳ ಆತ್ಮಾಹುತಿ...?

Published:
Updated:
ಚೌಳಿ ಮಠ: ಮೂವರು ಕಿರಿಯ ಸ್ವಾಮೀಜಿಗಳ ಆತ್ಮಾಹುತಿ...?

ಬೀದರ್: ತಾಲ್ಲೂಕಿನ ಚೌಳಿ ಗ್ರಾಮದಲ್ಲಿರುವ ಗಣೇಶ್ವರ ಅವಧೂತರ ಮಠದಲ್ಲಿ ಸೋಮವಾರ ಬೆಳಗಿನ ಜಾವ ಮಠದ ಮೂವರು ಸಾಧಕರು (ಕಿರಿಯ ಸ್ವಾಮೀಜಿಗಳು) 'ಅಗ್ನಿಪ್ರವೇಶ' ಮಾಡುವ ಮೂಲಕ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ದುರಂತ ಬೆಳಗಿನ ಜಾವ 4 ರಿಂದ 4.30 ರ ನಡುವೆ ಸಂಭವಿಸಿದೆ ಎಂದು ಆಂದಾಜಿಸಲಾಗಿದೆ. ಕಟ್ಟಿಗೆ ರಾಶಿಗೆ ಬೆಂಕಿ ಹೊತ್ತಿ ಕೊಂಡಿರುವುದನ್ನು ಗಮನಿಸಿದ ಇತರೆ ಸಾಧಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ, ಸುಟ್ಟ ಕಟ್ಟಿಗೆಗಳ ರಾಶಿ ಕೆದಕಿದಾಗ ಕರಕಲಾದ ದೇಹಗಳು ಪತ್ತೆಯಾಗಿವೆ.

ಮೂಲತಃ ಔರಾದ್ ತಾಲ್ಲೂಕು ಮಾನೂರು ನಿವಾಸಿ ಈರರೆಡ್ಡಿ ಸ್ವಾಮೀಜಿ (50), ನಾಗೋರಾ ನಿವಾಸಿ ಜಗನ್ನಾಥ ಸ್ವಾಮೀಜಿ (32) ಮತ್ತು ಮಠಕ್ಕೆ ಸಮೀಪದ ಚೌಳಿ ಗ್ರಾಮದವರಾದ ಪ್ರಣವ್ ಸ್ವಾಮೀಜಿ (16) ಮೃತಪಟ್ಟವರು. ಸುಟ್ಟು ಗುರುತು ಸಿಗದಷ್ಟು ಕರಕಲಾಗಿದ್ದ ದೇಹಗಳನ್ನು ಬಳಿಕ ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು.

ಪ್ರತಿಕ್ರಿಯಿಸಿ (+)