ಶನಿವಾರ, ಜನವರಿ 18, 2020
20 °C

ಛತ್ತೀಸಗಡ: ಅಭ್ಯರ್ಥಿ ತಿರಸ್ಕರಿಸುವ ಉತ್ಸಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಛತ್ತೀಸಗಡದ ನಕ್ಸ್‌ಲ್‌­ಪೀಡಿತ ಬಸ್ತರ್‌ ಪ್ರದೇಶದ ಜನರು ಈ ಚುನಾವಣೆಯಲ್ಲಿ ಹೊಸದಾಗಿ  ಪರಿಚ­ಯಿ­ಸಲಾಗಿರುವ 

‘ಯಾರಿಗೂ ಮತವಿಲ್ಲ’ ಎಂಬ ಕಣದಲ್ಲಿರುವ ಎಲ್ಲ ಅಭ್ಯರ್ಥಿ­ಗಳನ್ನು ತಿರಸ್ಕರಿಸುವ ಅವಕಾಶ­ವನ್ನು ಉತ್ಸಾಹದಿಂದ ಬಳಸಿಕೊಂಡಿದ್ದಾರೆ.ಈ ಅವಕಾಶವನ್ನು ದೆಹಲಿಯ  ಮತದಾರರು ಕನಿಷ್ಠ ಪ್ರಮಾಣದಲ್ಲಿ ಬಳಸಿಕೊಂಡಿದ್ದಾರೆ.ಛತ್ತೀಸಗಡದಲ್ಲಿ ಮತದಾನ ಮಾಡಿ­ರು­ವವರಲ್ಲಿ ಶೇ 3.07 ರಷ್ಟು ಜನರು ಯಾರಿಗೂ ಮತ ನೀಡದಿರುವ ಅವಕಾಶ ಬಳಸಿಕೊಂಡಿದ್ದರೆ ದೆಹಲಿಯಲ್ಲಿ ಶೇ 0.63ರಷ್ಟು ಮತದಾರರು ಮಾತ್ರ ಈ ಗುಂಡಿ ಒತ್ತಿದ್ದಾರೆ. ಕಾಂಗ್ರೆಸ್‌ ಅಥವಾ ಬಿಜೆಪಿಯಂತಹ ಸಾಂಪ್ರದಾಯಿಕ ರಾಜಕೀಯ ಪಕ್ಷಗಳಿಂದ ಬೇಸತ್ತಿದ್ದ ಜನರಿಗೆ ದೆಹಲಿಯಲ್ಲಿ ಪರ್ಯಾಯ ಆಯ್ಕೆಯಾಗಿ ಆಮ್‌ ಆದ್ಮಿ ಪಕ್ಷ ದೊರಕಿರುವುದು ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ರಾಜಸ್ತಾನ ಮತ್ತು ಮಧ್ಯಪ್ರದೇಶಗಳಲ್ಲಿಯೂ ಯಾರಿಗೂ ಮತ ಹಾಕದ ಆಯ್ಕೆ ಆಯ್ದುಕೊಂಡ­ವರ ಪ್ರಮಾಣ ದೆಹಲಿಗಿಂತ ಹೆಚ್ಚಾಗಿದೆ. ಈ ರಾಜ್ಯಗಳಲ್ಲಿ ಮತ ಚಲಾಯಿಸಿದ ಮತದಾರರ ಪೈಕಿ ಕ್ರಮವಾಗಿ ಶೇ 1.92 ಮತ್ತು ಶೇ. 1.9 ರಷ್ಟು ಮತದಾರರು ಈ ಆಯ್ಕೆ ಬಳಸಿಕೊಂಡಿದ್ದಾರೆ.ಸೆಪ್ಟೆಂಬರ್‌ 27ರಂದು ಸುಪ್ರೀಂ ಕೋರ್ಟ್‌ ನೀಡಿದ ಆದೇಶಕ್ಕೆ ಅನುಗುಣ­ವಾಗಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಯಾರಿಗೂ ಮತ ಇಲ್ಲ ಎಂಬ ಆಯ್ಕೆಯನ್ನು ಚುನಾವಣಾ ಆಯೋಗ ಮತಯಂತ್ರದಲ್ಲಿ ಮೊದಲ ಬಾರಿಗೆ ಅಳವಡಿಸಿತ್ತು.ಛತ್ತೀಸಗಡದ, ಅದರಲ್ಲೂ ವಿಶೇಷ­ವಾಗಿ ನಕ್ಸಲ್‌ ಪ್ರಾಬಲ್ಯದ ಬಸ್ತರ್‌ ಪ್ರದೇಶದ 12 ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಈ ಅವಕಾಶ  ಬಳಸಿಕೊಂಡಿದ್ದಾರೆ.ಬಸ್ತರ್‌ ಜಿಲ್ಲೆಯ ಚಿತ್ರಕೂಟ್ ಕ್ಷೇತ್ರ­ದಲ್ಲಿ 10,848 ಮತದಾರರು ಕಣದ­ಲ್ಲಿದ್ದ ಎಲ್ಲ ಆರು ಅಭ್ಯರ್ಥಿಗಳನ್ನು ತಿರ­ಸ್ಕರಿ­ಸಿದ್ದಾರೆ. ಹಾಗೆಯೇ ದಾಂತೇವಾಡ­ದಲ್ಲಿ 9,677, ಕೇಶ್ಕಲ್‌ನಲ್ಲಿ 8,381,­ಬಿಜಾಪುರದಲ್ಲಿ 7,179 ಮತ್ತು ನಾರಾಯಣಪುರದಲ್ಲಿ 6,731­ಮತದಾರರು ಕಣದಲ್ಲಿದ್ದ ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸಿದ್ದಾರೆ.ತಮ್ಮ ಪ್ರಾಬಲ್ಯದ ಪ್ರದೇಶಗಳಲ್ಲಿ ಹಿಂದೆಯೂ ಮತದಾನ ಬಹಿಷ್ಕರಿಸು­ವಂತೆ ನಕ್ಸಲರು ಕರೆ ನೀಡಿದ್ದರು. ಈ ಬಾರಿಯೂ ಅದು ಪುನರಾವರ್ತನೆ­ಯಾಗಿದೆ.

ರಾಜಸ್ತಾನದಲ್ಲಿ ಚುನಾವಣೆ ನಡೆದ ಎಲ್ಲ 199 ಕ್ಷೇತ್ರಗಳ ಮತದಾರರು ಕೂಡ ಅಭ್ಯರ್ಥಿಗಳನ್ನು ತಿರಸ್ಕರಿಸುವ ಅವಕಾಶವನ್ನು ಬಳಸಿಕೊಂಡಿದ್ದಾರೆ. ಈ ಹಕ್ಕಿನ ಬಳಕೆಯ ಪ್ರಮಾಣ 349ರಿಂದ 7,244ರವರೆಗೆ ಇದೆ. 20 ಕ್ಷೇತ್ರಗಳ ಮತದಾರರು ಈ ಅವಕಾಶವನ್ನು ಬಳಸಿ­ಕೊಂಡಿದ್ದು ಅದರಲ್ಲಿ16 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲು ಕ್ಷೇತ್ರಗಳು ಸೇರಿವೆ. ಮಧ್ಯ ಪ್ರದೇಶದ ಭೋಪಾಲ್‌ ಉತ್ತರ ಕ್ಷೇತ್ರದಲ್ಲಿ 2,337 ಮತದಾರರು ಎಲ್ಲ ಅಭ್ಯರ್ಥಿ­ಗಳನ್ನು ತಿರಸ್ಕರಿಸಿದ್ದಾರೆ.ದೆಹಲಿಯಲ್ಲಿ ಈ ಅವಕಾಶವನ್ನು ಬಳಸಿಕೊಂಡವರ ಸಂಖ್ಯೆ ಕೇವಲ 49,892 ಆಗಿದ್ದರೆ, ಮಧ್ಯ ಪ್ರದೇಶದಲ್ಲಿ 6,43,144 ಮತದಾರರು ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸಿದ್ದಾರೆ.ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸುವ ಮತಗಳನ್ನು ಸಿಂಧು ಎಂದು ಪರಿಗಣಿಸ­ಲಾಗುವುದಿಲ್ಲ. ಹಾಗಾಗಿ ಕಡಿಮೆ ಮತ ಗಳಿಸಿದ ಅಭ್ಯರ್ಥಿಗಳ ಠೇವಣಿ ಮುಟ್ಟು­ಗೋಲು ಹಾಕುವ ಸಂದರ್ಭ­ದಲ್ಲಿ ಈ ಮತಗಳನ್ನು ಗಣನೆಗೆ ತೆಗೆದುಕೊಳ್ಳ­ಲಾಗುವುದಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.  ಒಂದು ವೇಳೆ ಯಾರಿಗೂ ಮತ ಹಾಕದವರ ಸಂಖ್ಯೆ­ಯೇ ಹೆಚ್ಚಾಗಿದ್ದರೆ, ನಂತರದ ಸ್ಥಾನದ­ಲ್ಲಿರುವ ಗರಿಷ್ಠ ಮತ  ಪಡೆದವರನ್ನು ವಿಜಯಿಗಳಾಗಿ ಘೋಷಿಸ­ಲಾಗುವುದು ಎಂದೂ ಆಯೋಗ ಹೇಳಿತ್ತು.ಇಲ್ಲಿ ಕ್ರಿಮಿನಲ್‌ ಆರೋಪಿ ಶಾಸಕರು ಕಡಿಮೆ

ನವದೆಹಲಿ (ಪಿಟಿಐ):
ವಿಧಾನಸಭಾ ಚುನಾವಣೆ ಎದುರಿಸಿದ ನಾಲ್ಕು ಪ್ರಮುಖ ರಾಜ್ಯಗಳ ಪೈಕಿ ಛತ್ತೀಸಗಡ­ದಲ್ಲಿ  ಅತ್ಯಂತ ಕಡಿಮೆ ಪ್ರಮಾಣ­ದಲ್ಲಿ ಕ್ರಿಮಿನಲ್‌ ಆರೋಪಿಗಳು  ಶಾಸಕ­ರಾಗಿ ಆಯ್ಕೆಯಾಗಿದ್ದರೆ,  ದೆಹಲಿಯಲ್ಲಿ ಇದು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದೆ.

ಚುನಾವಣೆಗೆ ಸ್ಪರ್ಧಿಸಿದ್ದವರು ನಾಮ­ಪತ್ರ ಸಲ್ಲಿಕೆ ವೇಳೆ ಸಲ್ಲಿಸಿದ್ದ ಪ್ರಮಾಣ­ಪತ್ರವನ್ನು ಆಧರಿಸಿ ‘ಅಸೋಸಿಯೇ­ಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್‌್ಸ’ ಎಂಬ ಸಂಸ್ಥೆ ವಿವಿಧ ರಾಜ್ಯಗಳಲ್ಲಿ ಹೊಸದಾಗಿ ಆಯ್ಕೆ­ಯಾ­ಗಿರುವ ಕ್ರಿಮಿನಲ್‌ ಶಾಸಕರ  ಪ್ರಮಾಣವನ್ನು ಲೆಕ್ಕ ಹಾಕಿದೆ. ಆ ಪ್ರಕಾರ ನಾಲ್ಕು ರಾಜ್ಯಗಳಲ್ಲಿನ  ಕ್ರಿಮಿನಲ್‌ ಆರೋಪಿ ಶಾಸಕರ ಪ್ರಮಾಣ ಹೀಗಿದೆ. 

 

ಪ್ರತಿಕ್ರಿಯಿಸಿ (+)