ಛಲವಾದಿ ಭವನಕ್ಕೆ 5 ಕೋಟಿ: ಮುಖ್ಯಮಂತ್ರಿ ಭರವಸೆ

ಸೋಮವಾರ, ಜೂಲೈ 22, 2019
27 °C

ಛಲವಾದಿ ಭವನಕ್ಕೆ 5 ಕೋಟಿ: ಮುಖ್ಯಮಂತ್ರಿ ಭರವಸೆ

Published:
Updated:

ಬೆಂಗಳೂರು: `ನಗರದ ಕೆಂಗೇರಿ ಬಳಿಯ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಛಲವಾದಿ ಭವನ ನಿರ್ಮಾಣಕ್ಕೆ ಐದು ಕೋಟಿ ರೂಪಾಯಿ ನೆರವು ನೀಡಲಾಗುವುದು~ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.ಛಲವಾದಿ ಮಹಾಸಭಾ ಸಂಸ್ಥೆಯು ನಗರದ ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಹಾಸಭಾದ ಎರಡನೇ ಸಮಾವೇಶದಲ್ಲಿ ಛಲವಾದಿ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.`ಶಿವಮೊಗ್ಗದಲ್ಲಿ ನಡೆದ ಪ್ರಥಮ ಸಮ್ಮೇಳನದಲ್ಲಿ ನೀಡಿದ ಭರವಸೆಯಂತೆ ಭವನ ನಿರ್ಮಾಣಕ್ಕೆ ಎರಡು ಎಕರೆ ಭೂಮಿ ನೀಡಲಾಗಿದೆ. ಅದೇ ರೀತಿ ಭವನ ನಿರ್ಮಾಣಕ್ಕೆ ಈ ಹಿಂದೆ ಮೂರು ಕೋಟಿ ರೂಪಾಯಿ ನೀಡಲಾಗಿತ್ತು. ಭವನವು ಅತ್ಯಾಧುನಿಕ ಸೌಲಭ್ಯಗಳಿಂದ ಸುಂದರವಾಗಿರಬೇಕು ಎಂಬ ಕಾರಣಕ್ಕೆ ಹೆಚ್ಚುವರಿಯಾಗಿ ಐದು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುವುದು~ ಎಂದು ಹೇಳಿದರು.`ಛಲವಾದಿ ಸಮುದಾಯ ಭವನವನ್ನು ವರ್ಷದೊಳಗೆ ನಿರ್ಮಿಸಿ ಉದ್ಘಾಟಿಸಬೇಕು. ಭವನಕ್ಕೆ ಭೇಟಿ ನೀಡುವ ಪ್ರತಿಯೊಬ್ಬರು ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಸ್ಮರಿಸಬೇಕು~ ಎಂದರು.`ರಾಜ್ಯದಲ್ಲಿ ಸ್ಥಗಿತಗೊಂಡಿರುವ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚಿಸಲಾಗುವುದು. ರಾಜ್ಯದ ಯಾವುದೇ ಗ್ರಾಮದಲ್ಲೂ ಪರಿಶಿಷ್ಟ ಜಾತಿಯ ಜನತೆ ಗುಡಿಸಲ್ಲಿ ವಾಸಿಸದಂತೆ ಉತ್ತಮ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು. ಪರಿಶಿಷ್ಟ ಜಾತಿಗೆ ಸೇರಿದವರು ರಾಜ್ಯದಲ್ಲಿ ಒಂದು ಕೋಟಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಜನರ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು~ ಎಂದರು.ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, `ಪರಿಶಿಷ್ಟ ಜಾತಿಯ ಜನರು ಶ್ರಮಿಕ ವರ್ಗದವರು. ಈ ಸಮುದಾಯದ ಜನತೆ ಯಾವುದೇ ಕಾರಣಕ್ಕೂ ಸ್ವಾಭಿಮಾನವನ್ನು ಬಿಟ್ಟುಕೊಡದೇ ತಮ್ಮ ಹಕ್ಕುಗಳನ್ನು ಪಡೆಯಲು ಹೋರಾಡಬೇಕು~ ಎಂದರು.ಸಂಘಟಿತರಾಗಬೇಕು: `ಪರಿಶಿಷ್ಟ ಜಾತಿಯ ಜನರನ್ನು ಒಡೆದು ಆಳುವ ಶಕ್ತಿಗಳು ಸಾಕಷ್ಟಿವೆ. ಈ ಶಕ್ತಿಗಳ ಬಗ್ಗೆ ಜನಾಂಗದ ಜನತೆ ಎಚ್ಚರದಿಂದಿರಬೇಕು. ಒಳ ಪಂಗಡಗಳನ್ನು ಮರೆತು ಸಂಘಟಿತರಾಗಬೇಕು~ ಎಂದರು. `ಸಮುದಾಯದವರಿಗೆ ಯಾರ ಭಿಕ್ಷೆಯೂ ಬೇಡ. ನ್ಯಾಯಯುತವಾಗಿ ಸಿಗಬೇಕಾದ ಸವಲತ್ತುಗಳನ್ನು ಪಡೆಯಲು ಹೋರಾಡಬೇಕು. ಆ ಮೂಲಕ ರಾಜಕೀಯ ಶಕ್ತಿ ಪಡೆಯಬೇಕು~ ಎಂದು ಕರೆ ನೀಡಿದರು.50 ಕೋಟಿ ಅನುದಾನಕ್ಕೆ ಮನವಿ:  ಛಲವಾದಿ ಮಹಾಸಭಾ ಅಧ್ಯಕ್ಷ ಎಚ್.ಕೆ. ಬಸವರಾಜು ಮಾತನಾಡಿ, `ಛಲವಾದಿ ಸಮುದಾಯಕ್ಕೆ ಸೇರಿದ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು. ವೈದ್ಯಕೀಯ ಕಾಲೇಜು ಸ್ಥಾಪನೆಗೆ 25 ಎಕರೆ ಭೂಮಿ ಹಾಗೂ 50 ಕೋಟಿ ರೂಪಾಯಿ ಅನುದಾನ ನೀಡಬೇಕು~ ಎಂದು ಮನವಿ ಮಾಡಿದರು.ಸಚಿವರಾದ ಎ.ನಾರಾಯಣಸ್ವಾಮಿ, ಗೋವಿಂದ ಕಾರಜೋಳ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ, ಶಾಸಕರಾದ ಎಚ್.ಕೆ. ಕುಮಾರಸ್ವಾಮಿ, ಎಂ.ಪಿ. ಕುಮಾರಸ್ವಾಮಿ, ಮಾಜಿ ಶಾಸಕ ಕೆ.ಅನ್ನದಾನಿ, ಐಎಎಸ್ ಅಧಿಕಾರಿ ಕೆ.ಶಿವರಾಂ ಇತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry