ಛಲವಾದಿ ಮಹಾಸಭಾ ಪದಾಧಿಕಾರಿಗಳ ಆಯ್ಕೆ

7

ಛಲವಾದಿ ಮಹಾಸಭಾ ಪದಾಧಿಕಾರಿಗಳ ಆಯ್ಕೆ

Published:
Updated:

ತಾಳಿಕೋಟೆ: ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ಸ್ಥಳೀಯ ಶಾಖೆ ವತಿಯಿಂದ  ಭಾನುವಾರ  ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ಸಭೆ ಕರೆಯಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಛಲವಾದಿ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದೀಶ ಪ್ರಭಾಕರ  ಮಾತನಾಡಿ,  ಶಿವಮೊಗ್ಗದಲ್ಲಿ ನಡೆದ 1ನೇ ಸಮಾವೇಶದಲ್ಲಿ ಕರ್ನಾಟಕ ಸರ್ಕಾರವು ಛಲವಾದಿ ಮಹಾಸಭಾದ ಕಟ್ಟಡ ನಿರ್ಮಾಣಕ್ಕಾಗಿ  ನಾದಭಾವಿ ಹತ್ತಿರ 2 ಎಕರೆ ಬಿಡಿಎ ಜಾಗವನ್ನು ಹಾಗೂ ರೂ.3 ಕೋಟಿ ಹಣವನ್ನು  ಒದಗಿಸಿತ್ತು.

 

ನಂತರ  ಬೆಂಗಳೂರಲ್ಲಿ ನಡೆದ 2 ನೇ ಸಮಾವೇಶದಲ್ಲಿ ಚಲವಾದಿ ಸಮಾಜದ ಭವ್ಯ ಕಟ್ಟಡಕ್ಕಾಗಿ ರೂ.5ಕೋಟಿ ಹಣವನ್ನು ತಕ್ಷಣ ಬಿಡುಗಡೆ ಮಾಡಿತು. ಪರಿಣಾಮವಾಗಿ  ಕಟ್ಟಡ ಮುಕ್ತಾಯ ಹಂತದಲ್ಲಿದ್ದು  ಕಟ್ಟಡದಿಂದ ಬರುವ ಆದಾಯವನ್ನು ಛಲವಾದಿ ಮಹಾಸಭಾದ ಪ್ರತಿಭಾವಂತ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ಬಳಸಲಾಗುವುದು ಎಂದರು.ಸಭೆಯ ಅಧ್ಯಕ್ಷತೆಯನ್ನು ಪುರಸಭಾ ಸದಸ್ಯ ಮುತ್ತಣ್ಣ ಚಮಲಾಪುರ ವಹಿಸಿದ್ದರು. ಸಭೆಯಲ್ಲಿ ಸಮಾಜದ ಅಭಿವೃದ್ಧಿ ಕುರಿತು ಮಾಡಬೇಕಾದ ಕಾರ್ಯಗಳ ಕುರಿತು ರೂಪರೇಷೆಗಳನ್ನು ಚರ್ಚಿಸಲಾಯಿತು. ಸಭೆಯಲ್ಲಿ  ನೂತನವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಅಧ್ಯಕ್ಷರಾಗಿ ಮುತ್ತಣ್ಣ ಚಮಲಾಪುರ, ಗೌರವಾಧ್ಯಕ್ಷರಾಗಿ ಮಲ್ಲಪ್ಪ ಕಟ್ಟಿಮನಿ ಹಾಗೂ ಚನ್ನಬಸಪ್ಪ ಕಟ್ಟಿಮನಿ, ಉಪಾಧ್ಯಕ್ಷರಾಗಿ ರಮೇಶ ಹೊನ್ನಳ್ಳಿ ಹಾಗೂ ಶಂಕರ ಕಟ್ಟಿಮನಿ, ಶಾಂತಪ್ಪ ಚಲವಾದಿ (ಪ್ರಧಾನ ಕಾರ್ಯದರ್ಶಿ), ಮಾಳಪ್ಪ ಬಿಳೇಭಾವಿ (ಸಹಕಾರ್ಯದರ್ಶಿ), ಬಸವರಾಜ ಗುಂಡಕನಾಳ (ಖಜಾಂಚಿ), ಸಹ ಖಜಾಂಚಿಗಳಾಗಿ ಮಲ್ಲಿಕಾರ್ಜುನ ಬೋಳವಾಡ, ಸಂಗಮೇಶ ಕಾರಗನೂರ, ನಿಂಗಣ್ಣ ಹೊಸಮನಿ, ನೀಲಪ್ಪ ಕಟ್ಟಿಮನಿ ಹಾಗೂ  ನಾಗರಾಜ ಚಲವಾದಿ, ಶಿವಾನಂದ ಬೂದಿಹಾಳ (ಲೆಕ್ಕಪರಿಶೋಧಕರು), ನಿರ್ದೇಶಕರಾಗಿ ಗಿರಿಯಪ್ಪ ತಳವಾರ, ಯಮನಪ್ಪ ನಾಟೀಕಾರ, ಮರೆಪ್ಪ ತಾರನಾಳ ಹಾಗೂ  ಚಂದ್ರಶೇಖರ ದೊಡಮನಿ ಇವರನ್ನು ಆಯ್ಕೆ ಮಾಡಲಾಯಿತು.ಸಭೆಯಲ್ಲಿ ಖಾಸಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಪಿ.ಬಿ.ಗುಬ್ಬೇವಾಡ, ಶಿಕ್ಷಕರಾದ ಬಿ.ಜಿ.ಫತ್ತೆಪುರ,  ಎಂ.ಎಸ್.ಚಲಾಕಾರ, ಸಿದ್ದು ಕಟ್ಟಿಮನಿ, ತಿಪ್ಪಣ್ಣ ಹರನಾಳ, ಮಲ್ಲಣ್ಣ ಬೇನಾಳ ಬಸು ದೊಡಮನಿ, ಸಾರಿಗೆ ಇಲಾಖೆಯ ಎಂ.ಪಿ.ಚಬನೂರ, ಎಂ,ಎಂ.ಚಲವಾದಿ, ಸಾತಪ್ಪ ಹೊಸಮನಿ ನಿಂಗಣ್ಣ ಹೊನ್ನಳ್ಳಿ, ಹರೀಶ ಬಸರಿಕಟ್ಟಿ, ನಾಗೇಶ ಕಟ್ಟಿಮನಿ, ಮಹೇಶ ಚಲವಾದಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಪ್ರಭಾಕರ ಆಗಮಿಸಿದ್ದರು. ವೈ.ಬಿ.ಕರಿಭಾವಿ ಶಿಕ್ಷಕರು  ಪ್ರಾಸ್ತಾವಿವಾಗಿ ಮಾತನಾಡಿದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry