ಛಾಪಾ ಕಾಗದ ತೊಂದರೆ ತಪ್ಪಿಸಿ

ಗುರುವಾರ , ಜೂಲೈ 18, 2019
22 °C

ಛಾಪಾ ಕಾಗದ ತೊಂದರೆ ತಪ್ಪಿಸಿ

Published:
Updated:

ಕಂದಾಯ ಇಲಾಖೆಯು ರಾಜ್ಯದ ಎಲ್ಲಾ ಉಪ-ನೋಂದಣಾಧಿಕಾರಿಯವರ ಕಚೇರಿಯಿಂದ ಛಾಪಾ ಕಾಗದಗಳನ್ನು ಮಾರಾಟ ಮಾಡುತ್ತಿದೆ. ಇತ್ತೀಚೆಗೆ ದಸ್ತಾವೇಜು ಹಾಳೆ ಅಥವಾ ಬೇರಾವುದೇ ಹಾಳೆಯ ಮೇಲೆ ಬೆರಳಚ್ಚು ಮಾಡಿಸಿದ ನಂತರವೇ ಉಬ್ಬಚ್ಚು ಮಾಡಲಾಗುತ್ತಿದೆ.ಇದರಿಂದ ಸಾರ್ವಜನಿಕರಿಗೆ ಮತ್ತು ವಕೀಲರಿಗೆ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಸಂಬಂಧಪಟ್ಟ ಸಚಿವರು, ಛಾಪಾ ಕಾಗದಗಳನ್ನು ಮುಕ್ತವಾಗಿ ಖಾಲಿ ಹಾಳೆಯ ಮೇಲೆ ಉಬ್ಬಚ್ಚು ಮಾಡಿ ಮಾರಾಟ ಮಾಡುವಂತೆ ಉಪನೋಂದಣಾಧಿಕಾರಿಗಳಿಗೆ ಆದೇಶ ನೀಡಲಿ. ಇಲ್ಲವೇ ಸದರಿ ಛಾಪಾ ಕಾಗದಗಳನ್ನು ಸರ್ಕಾರದ ಖಜಾನೆಯಿಂದ ಮಾರಾಟ ಮಾಡಲು ಆದೇಶ ನೀಡಬೇಕೆಂದು ಪ್ರಾರ್ಥಿಸುತ್ತೇನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry