ಶುಕ್ರವಾರ, ಜೂನ್ 25, 2021
29 °C

ಛಾಪಾ ಕಾಗದ ಪ್ರಕರಣ: ವಕೀಲ ಕೇಶವ ಭಟ್‌ ಬಂಧನಕ್ಕೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಕಲಿ ಛಾಪಾ ಕಾಗದ ಮಾರಾಟ ಪ್ರಕರಣದ ಆರೋಪಿ ವಕೀಲ ಕೇಶವಭಟ್ಟ ಅವರನ್ನು 15 ದಿನದೊಳಗೆ ಬಂಧಿಸುವಂತೆ ಹೈಕೋರ್ಟ್‌ ಸೋಮವಾರ ಆದೇಶಿಸಿದೆ.ಅವರಿಗೆ ನೀಡಿದ್ದ ಜಾಮೀನು ರದ್ದು­ಪಡಿಸುವಂತೆ ಬಿ.ತಿಮ್ಮಪ್ಪ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾ­ರಣೆ ನಡೆಸು­ತ್ತಿರುವ ಎಸ್‌.ಎನ್‌.­ಸತ್ಯನಾರಾಯಣ ಅವ­ರಿದ್ದ ಏಕಸದಸ್ಯ ಪೀಠ, ಆರೋಪಿ­ಯ­ನ್ನು ಬಂಧಿಸಿ ವರದಿ ನೀಡುವಂತೆ ತಿಳಿಸಿದೆ.ಆರೋಪಿಯನ್ನು ಅಕ್ರಮವಾಗಿ ಬಿಡು­ಗಡೆ ಮಾಡಿದ್ದ ಉಡುಪಿ ಜಿಲ್ಲೆಯ ಬೈಂದೂರು ಪೊಲೀಸ್ ಠಾಣಾ ಸಬ್ ಇನ್‌­ಸ್ಪೆಕ್ಟರ್‌ ಅವರನ್ನು ಈ ಹಿಂದೆ ಅಮಾ­ನತ್ತು ಮಾಡಲಾಗಿತ್ತು. ಪ್ರಕ­ರಣದ ತನಿಖೆಯನ್ನು ಸಿಐಡಿಗೆ ವಹಿಸು­ವುದಕ್ಕೆ  ಪರಿಶೀಲಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಈ ಹಿಂದೆ ಪೀಠಕ್ಕೆ ತಿಳಿಸಿತ್ತು.ಆರೋಪಿ ಕೇಶವಭಟ್ಟ ವಿಚಾ­ರಣೆಗಾಗಿ ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಂಡಿದ್ದಾರೆ.ಇದರಿಂದಾಗಿ ಆರೋಪಿ ಪೊಲೀಸರು ಅಥವಾ ನ್ಯಾಯಾ­­ಲಯದ ಮುಂದೆ ಹಾಜ­ರಾಗು­ವಂತೆ ಸೂಚಿಸಬೇಕು ಎಂದು ಅರ್ಜಿದಾರ ಪರ ವಕೀಲರು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.