ಶನಿವಾರ, ಏಪ್ರಿಲ್ 17, 2021
32 °C

ಛಾಯಾಗ್ರಹಣ ಕ್ರಿಯಾಶೀಲ ವೃತ್ತಿ: ರತ್ನಾಕರ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಕಲೇಶಪುರ: ಛಾಯಾಗ್ರಹಣ ಕೇವಲ ಹಣಕಾಸು ವ್ಯವಹಾರ ಮಾಡುವ ವೃತ್ತಿಯಲ್ಲ. ವ್ಯಕ್ತಿಯಲ್ಲಿ ಕ್ರೀಯಾಶೀಲತೆ ಹುಟ್ಟುಹಾಕುವ ಒಂದು ಕಲೆ ಎಂದು ಹಿರಿಯ ಛಾಯಾಗ್ರಾಹಕ ಉಡುಪಿ ರತ್ನಾಕರ್ ಹೇಳಿದರು.ಮಂಗಳವಾರ ನಡೆದ ಮಲೆನಾಡು ವೃತ್ತಿಪರ ಛಾಯಾಗ್ರಾಹಕರ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿ, ತನ್ನ ಅನುಭವ, ಕ್ರಿಯಾಶೀಲತೆ ಬಳಸಿ ಒಬ್ಬ ಛಾಯಾಗ್ರಾಹಕ ತೆಗೆಯುವ ಪ್ರತಿಯೊಂದು ಭಾವಚಿತ್ರಕ್ಕೂ ಬೆಲೆ ಕಟ್ಟುವುದಕ್ಕೆ ಸಾಧ್ಯವಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಛಾಯಾಗ್ರಾಹಕರ ನಡುವೆ ಏರ್ಪಟ್ಟಿರುವ ಅನಾರೋಗ್ಯಕರವಾದ ಬೆಲೆ ಸ್ಪರ್ದೆಯಿಂದ ತಮ್ಮ ವೃತ್ತಿಯ ಘನತೆಯನ್ನು ಮರೆಯುತ್ತಿರುವುದು ವಿಷಾದನೀಯ ಎಂದರು.ಸಂಘದ ಅಧ್ಯಕ್ಷ ಕರುಣಾಕರ್, ಕಾರ್ಯದರ್ಶಿ ಮಧು, ಖಜಾಂಚಿ ಶ್ರೀನಿವಾಸ್, ದಿನೇಶ್ ಆಲೂರು ತಾಲ್ಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ನೀಲೇಶ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.