ಛಾಯಾಚಿತ್ರ, ವಿಡಿಯೊ ವಸ್ತು ಪ್ರದರ್ಶನ

7

ಛಾಯಾಚಿತ್ರ, ವಿಡಿಯೊ ವಸ್ತು ಪ್ರದರ್ಶನ

Published:
Updated:
ಛಾಯಾಚಿತ್ರ, ವಿಡಿಯೊ ವಸ್ತು ಪ್ರದರ್ಶನ

ಬೆಂಗಳೂರು: ಅಖಿಲ ಕರ್ನಾಟಕ ವಿಡಿಯೊ ಮತ್ತು ಛಾಯಾಗ್ರಾಹಕರ ಸಂಘವು `ಬೈ ಮತ್ತು ಸೆಲ್ ಕಂಪೆನಿ~ಯ ಸಹಯೋಗದಲ್ಲಿ ಶುಕ್ರವಾರ ನಗರದ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ 29ನೇ ಅಂತರರಾಷ್ಟ್ರೀಯ ಛಾಯಾಚಿತ್ರ ಮತ್ತು ವಿಡಿಯೊ ವಸ್ತು ಪ್ರದರ್ಶನವನ್ನು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಉದ್ಘಾಟಿಸಿದರು.ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ 150 ಕ್ಕೂ ಹೆಚ್ಚು ಸಂಸ್ಥೆಗಳು ತಮ್ಮ ನೂತನ ಪರಿಕರ ಮತ್ತು ಸೇವೆಗಳನ್ನು ಪ್ರದರ್ಶಿಸಲಿದ್ದು, ಒಂದು ಲಕ್ಷ ವಿಸ್ತೀರ್ಣದ ವಿಶಾಲ ಸ್ಥಳದಲ್ಲಿ ಛಾಯಾಗ್ರಹಣ ಸಂಬಂಧಿಸಿದ 500 ಕ್ಕೂ ಹೆಚ್ಚು ವಸ್ತುಗಳು ಪ್ರದರ್ಶನಗೊಳ್ಳಲಿದೆ.ಮಾರುಕಟ್ಟೆಗೆ ಹೊಸದಾಗಿ ಪರಿಚಯಿಸಿರುವ ಛಾಯಾಗ್ರಹಣದ ವಿವಿಧ ಸಂಘ ಸಂಸ್ಥೆಗಳಿಂದ ಫೋಟೋ ಮತ್ತು ವಿಡಿಯೊಗ್ರಫಿಗಳ ಪ್ರಾತ್ಯಕ್ಷತೆ, ಪ್ರದರ್ಶನ ಹಾಗೂ ತರಬೇತಿ ಕಾರ್ಯಗಾರ ನಡೆಯಲಿದೆ.ಅಂತರರಾಷ್ಟ್ರೀಯ ಉತ್ಪನ್ನ ಮತ್ತು ಸೇವೆಗಳಾದ ಫೋಟೋ ಸ್ಟುಡಿಯೋ ಪರಿಕರ, ಪೋಟೋ ಮತ್ತು ವಿಡಿಯೊ ಪರಿಕರ, ಮಿನಿ ಸಂಸ್ಕರಣ ಘಟಕ, ಆಲ್ಬಮ್ ತಯಾರಿಕಾ ಮಿಷನ್ ಮತ್ತು ಅದರ ಸಾಷ್ಟ್‌ವೇರ್, ವಿಡಿಯೋ ಎಡಿಟಿಂಗ್ ಸಲ್ಯೂಷನ್ ಅದರ ತಯಾರಿಕಾ ಯಂತ್ರೋಪಕರಣಗಳು ಪ್ರಮುಖ ಆಕರ್ಷಣೆಯಾಗಲಿದೆ.ಚೀನಾ ದೇಶದ ವಿಶೇಷ ಲೆಡ್ ಆ್ಯರಿ ಮತ್ತು ದೊಡ್ಡ  ಪ್ರಿಂಟರ್‌ಗಳು ಪ್ರದರ್ಶನಗೊಳ್ಳಲಿದೆ. ವಿಶೇಷವಾಗಿ ಅಂಧರಿಗೆ ಅಗತ್ಯವಾಗಿರುವ ಬ್ರೈನ್ ಸೈನ್ಸ್ ಮತ್ತು ಟ್ರಾಕ್ಟೈಲ್ ಸೈನ್ಸ್ ಪ್ರಥಮವಾಗಿ ದೇಶದಲ್ಲಿ ಮೊದಲು ನಗರದಲ್ಲಿ ಪ್ರದರ್ಶನಗೊಳ್ಳಲಿದ್ದು, ಪ್ರದರ್ಶನವು ಜುಲೈ ಒಂದರವರೆಗೆ ಮೂರು ದಿನಗಳ ವರೆಗೆ ನಡೆಯಲಿದೆ.ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಮೇಯರ್ ಡಿ.ವೆಂಕಟೇಶಮೂರ್ತಿ ,`ನಗರ ಅಭಿವೃದ್ಧಿಗಾಗಿ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಯನ್ನು ರೂಪಿಸಿಲಾಗುವುದು. `ಸ್ಕೈವಾಕ್, ರಸ್ತೆ ನಿರ್ಮಾಣ, ಆಸ್ಪತ್ರೆ ಮುಂತಾದವುಗಳನ್ನು ಈ ಯೋಜನೆಯ ಅಡಿಯಲ್ಲಿ ನಿರ್ಮಿಸಲಾಗುವುದು~ ಎಂದು ತಿಳಿಸಿದರು. ಪ್ರಸಕ್ತ ಸಾಲಿನಲ್ಲಿ ಉತ್ತಮ ಬಜೆಟ್ ನೀಡಲಾಗಿದ್ದು, ನಗರದಲ್ಲಿ ಬಂಡವಾಳ ಹೂಡಲು ಆಸಕ್ತಿ ಇರುವ ಉದ್ಯಮಿಗಳಿಗೆ ಅವಕಾಶ ನೀಡಲಾಗುವುದು~ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry