ಗುರುವಾರ , ಅಕ್ಟೋಬರ್ 17, 2019
26 °C

ಛಾಯಾಚಿತ್ರ ಸ್ಪರ್ಧೆ ಫಲಿತಾಂಶ ಪ್ರಕಟ

Published:
Updated:

ಬೆಂಗಳೂರು:  ಸಾಗರ ಫೋಟೋಗ್ರಾಫಿಕ್ ಸೊಸೈಟಿಯು ಏರ್ಪಡಿಸಿದ್ದ ಹನ್ನೊಂದನೇ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ. ಸ್ಪರ್ಧೆಯ ವಿವಿಧ ವಿಭಾಗಳಲ್ಲಿ ಪ್ರಶಸ್ತಿ ಪಡೆದವರ ಪಟ್ಟಿ ಈ ಕೆಳಕಂಡಂತಿದೆ.ಗ್ರಾಮೀಣ ಬದುಕು ವಿಭಾಗ: ಪ್ರಥಮ ಬಹುಮಾನ- ಸತ್ಯೇಂದ್ರ ಕುಮಾರ್, ನಲ್ಲಿಕೊಪ್ಪ ಹೊಸೂರು; ದ್ವಿತೀಯ ಬಹುಮಾನ- ಗಣೇಶ ಕಾಳೀಸರ, ಭೈರುಂಬೆ, ಶಿರಸಿ; ತೃತೀಯ ಬಹುಮಾನ- ಬಿ. ಸಧೀರ್, ದೊಡ್ಡಬಳ್ಳಾಪುರ.ಪಿಕ್ಟೋರಿಯಲ್ ವಿಭಾಗ: ಪ್ರಥಮ ಬಹುಮಾನ- ಸಲೀಂ ಬಾಲಬಟ್ಟಿ, ಮುಂಡರಗಿ; ದ್ವಿತೀಯ ಬಹುಮಾನ- ಜಿ.ಎಚ್. ದಿಗ್ವಾಸ್, ಶಿರಸಿ; ತೃತೀಯ ಬಹುಮಾನ- ಎನ್. ರಘುಪತಿ, ಬೆಂಗಳೂರು.ಎರಡೂ ವಿಭಾಗಗಳಲ್ಲಿನ ವಿಶೇಷ ಬಹುಮಾನ: ಅತ್ಯುತ್ತಮ ಬೆಳಕಿನ ಸಂಯೋಜನೆ- ಕೆ.ಆರ್. ತೇಜಸ್, ಬೆಂಗಳೂರು; ಅತ್ಯುತ್ತಮ ಶಾಲ ವಿದ್ಯಾರ್ಥಿ- ಸುನೈನಾ ನಾಯಕ್, ಹೆಬ್ರಿ, ಉಡುಪಿ; ಅತ್ಯುತ್ತಮ ಮಹಿಳಾ ಪ್ರದರ್ಶಕಿ ಪ್ರಶಸ್ತಿ- ಕೆ.ಆರ್. ರಾಜಲೇಖಾ, ಬೆಂಗಳೂರು; ಅತ್ಯುತ್ತಮ ಆಕ್ಷನ್- ದಯಾನಂದ ಕುಕ್ಕಜೆ, ಮಂಗಳೂರು.

ಪ್ರಶಂಸಾ ಪತ್ರಗಳು (ಗ್ರಾಮೀಣ ಬದುಕು): ಇಂದ್ರಕುಮಾರ್ ಬಿ ದಸ್ತಾನಾವರ್, ಬಾಗಲಕೋಟೆ; ರಾಘವೇಂದ್ರ, ಉಡುಪಿ; ವಿನುತಾ ಪ್ರಕಾಶ್ ಕಂದಕೂರ, ಕೊಪ್ಪಳ; ಎ. ರೋನಾಲ್ಡ್, ಬೆಂಗಳೂರು.ಪ್ರಶಂಸಾ ಪತ್ರ (ಪಿಕ್ಟೋರಿಯಲ್): ಜಿ.ಎನ್. ಗಣೇಶ್ ಕತಾರೆ, ಚಿತ್ರದುರ್ಗ; ರಾಮು ಕುಂಜೂರು, ಉಡುಪಿ; ಅಪೂರ್ವ, ಮೈಸೂರು; ವೈಶಾಲಿ, ಸಾಗರ.`ಹದಿನೈದು ಜಿಲ್ಲೆಗಳ ನೂರಾರು ಛಾಯಾಗ್ರಾಹಕರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಖ್ಯಾತ ಛಾಯಾಚಿತ್ರಗಾರ ಜಿನರಾಜ ಹೆಗ್ಗಡೆ ಅವರು ಅತ್ಯುತ್ತಮ ಛಾಯಾಚಿತ್ರಗಾರರನ್ನು ಬಹುಮಾನಕ್ಕೆ ಆಯ್ಕೆ ಮಾಡಿದ್ದಾರೆ. ಜ.26ರಂದು ಸಾಗರದಲ್ಲಿ ನಡೆಯುವ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುತ್ತದೆ. ಜ.26ರಿಂದ 28ರ ವರೆಗೆ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ~ ಎಂದು ಸೊಸೈಟಿಯ ನಿರ್ದೇಶಕ ಕೆ.ಎಸ್. ರಾಜಾರಾಮ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Post Comments (+)