ಸೋಮವಾರ, ಆಗಸ್ಟ್ 3, 2020
27 °C

ಛಾವಣಿ ಕುಸಿದು ನಾಲ್ವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಛಾವಣಿ ಕುಸಿದು ನಾಲ್ವರ ಸಾವು

ಬನಹಟ್ಟಿ (ಬಾಗಲಕೋಟೆ ಜಿಲ್ಲೆ):  ಮನೆಯ ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಸಮೀಪದ ರಬಕವಿ ಪಟ್ಟಣದಲ್ಲಿ ಭಾನುವಾರ ಬೆಳಗಿನ ಜಾವ ನಡೆದಿದೆ. ನಾಗಪ್ಪ ಅರಬಳ್ಳಿ (45), ಇವರ ಹೆಂಡತಿ ದಾನಮ್ಮ (36), ಮಕ್ಕಳಾದ ಓಂಪ್ರಕಾಶ (8) ಮತ್ತು ಪ್ರಮೋದ (7) ಮೃತಪಟ್ಟಿದ್ದಾರೆ. ಇನ್ನೊಬ್ಬ ಮಗ ಪ್ರಸಾದ (12) ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

 

ರಬಕವಿಯ  ವೀರಭದ್ರೇಶ್ವರ ದೇವಸ್ಥಾನದ ಹತ್ತಿರ ವಾಸವಾಗಿದ್ದ ನಾಗಪ್ಪ ಅವರು ಔಟ್‌ಪೋಸ್ಟ್ ಪೊಲೀಸ್ ಠಾಣೆಯ ಬಳಿ ಭಜಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಬೆಳಗಿನ ಜಾವ 3.30ರ ಸುಮಾರಿಗೆ ಎಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ಈ ದುರ್ಘಟನೆ ನಡೆದಿದೆ. ಮೇಲ್ಛಾವಣಿ ಕುಸಿಯುತ್ತಿರುವ ಸಪ್ಪಳವನ್ನು ಕೇಳಿ ಪ್ರಸಾದ್ ಎಚ್ಚೆತ್ತು ತನ್ನ ಕುಟುಂಬದವರನ್ನು ಎಬ್ಬಿಸುವಷ್ಟರಲ್ಲಿಯೇ ಈ ದುರಂತ ನಡೆದಿದೆ.ಮೇಲ್ಛಾವಣೆ ಸಡಿಲಗೊಂಡಿದ್ದರಿಂದ 2009ರಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಯೆಂದು ಗುರುತಿಸಿ ಪರಿಹಾರ ನೀಡಲಾಗಿತ್ತು. ಆಗ ದುರಸ್ತಿ ಮಾಡಿಸಿಕೊಂಡಿದ್ದರೂ ಛಾವಣಿ ಕುಸಿದಿದೆ. ಈ ಮನೆಯು ಹಳೆಯ ಮತ್ತು ಮೇಲ್ಮುದ್ದಿಯ ಮನೆಯಾಗಿತ್ತು.ಪರಿಹಾರ: ರಾಜ್ಯ ಸರ್ಕಾರದ ಮುಖ್ಯ ಸಚೇತಕ ಮತ್ತು ತೇರದಾಳ ಶಾಸಕ ಸಿದ್ದು ಸವದಿ ಅವರು ಮೃತರ ಕುಟುಂಬಕ್ಕೆ ಸರ್ಕಾರದಿಂದ ರೂ 1.5 ಲಕ್ಷ ಪರಿಹಾರ ಧನದ ಚೆಕ್ ವಿತರಣೆ ಮಾಡಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.