ಜಂಟಿ ಅಭಿವೃದ್ಧಿ ನಿಧಿಗೆ ಸಲಹೆ

ಮಂಗಳವಾರ, ಜೂಲೈ 16, 2019
25 °C

ಜಂಟಿ ಅಭಿವೃದ್ಧಿ ನಿಧಿಗೆ ಸಲಹೆ

Published:
Updated:

ಜಮ್ಮು (ಐಎಎನ್‌ಎಸ್): ಜಮ್ಮು-ಕಾಶ್ಮೀರ  ಮುಖ್ಯಮಂತ್ರಿಗಳು ತೀವ್ರವಾದಿಗಳಿಗಾಗಿ ರೂಪಿಸಿರುವ ಪುನರ್ವಸತಿ ಸೌಲಭ್ಯದ ಮಾದರಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಎಲ್ಲಾ ನಿರಾಶ್ರಿತರಿಗೂ ಪುನರ್ವಸತಿ ಕಲ್ಪಿಸುವ ಅಗತ್ಯ ಇದೆ ಅಲ್ಲಿನ ಪ್ರಧಾನ ಮಂತ್ರಿ ಸರ್ದಾರ್ ಆತಿಕ್‌ಖಾನ್ ಹೇಳಿದ್ದಾರೆ.ಗಡಿ ನಿಯಂತ್ರಣ ರೇಖೆಯ ಪಾಕಿಸ್ತಾನ ಭಾಗದಲ್ಲಿ ವಾಸವಾಗಿರುವ ಎಲ್ಲಾ ನಿರಾಶ್ರಿತರಿಗೂ ಪುನರ್ವಸತಿ ಕಲ್ಪಿಸಬೇಕು. ಇದಕ್ಕಾಗಿ ಎರಡೂ ಕಡೆಯವರು `ಜಂಟಿ ಅಭಿವೃದ್ಧಿ ನಿಧಿ~ ಸ್ಥಾಪಿಸಬೇಕು ಎಂದು ಸಲಹೆ ಮಾಡಿದ್ದಾರೆ.  ಜಮ್ಮು ಮತ್ತು ಕಾಶ್ಮೀರ ಸರ್ಕಾರ ಕಾಶ್ಮೀರ ಯುವಜನರಿಗಾಗಿ ಆರಂಭಿಸಿರುವ ಪುನರ್ವಸತಿ ಸೌಲಭ್ಯವನ್ನು ಪ್ರಶಂಸಿಸಿರುವ ಅವರು, ಇದೇ ಮಾದರಿಯ ಪುನರ್ವಸತಿಯನ್ನು ಪಾಕ್ ಗಡಿ ಭಾಗದಲ್ಲಿರುವ 21 ಲಕ್ಷ ನಿರಾಶ್ರಿತರಿಗೂ ವಿಸ್ತರಿಸಬೇಕು ಎಂದಿದ್ದಾರೆ.ಈ ಪ್ರದೇಶದ ಎಲ್ಲಾ ಜನರ ಜಾತಿ, ಮತ, ಧರ್ಮ, ನಂಬಿಕೆಗಳನ್ನು ಗಮನದಲ್ಲಿಟ್ಟುಕೊಂಡು ಇಂತಹ ನಿಧಿ ಸ್ಥಾಪಿಸುವುದರಿಂದ ಸಮಗ್ರ ಅಭಿವೃದ್ಧಿ ಮತ್ತು ಸಾಮರಸ್ಯಸಾಧಿಸುವ ತುರ್ತು ಇದೆ ಎಂದೂ ಖಾನ್ ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry