ಬುಧವಾರ, ಮೇ 12, 2021
17 °C

ಜಂಟಿ ಆರ್ಥಿಕ ವಲಯ: ಪಿಐಬಿಸಿ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಉಭಯ ದೇಶಗಳ ಗಡಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ವೃದ್ಧಿಗಾಗಿ `ಜಂಟಿ ಆರ್ಥಿಕ ವಲಯ~ ರೂಪಿಸುವುದು ಅತ್ಯಗತ್ಯ ಎಂದು ಪಾಕಿಸ್ತಾನ-ಭಾರತ ವಾಣಿಜ್ಯ ಉದ್ಯಮ ಸಂಸ್ಥೆ(ಪಿಐಬಿಸಿ) ಭಾರತ ಸರ್ಕಾರವನ್ನು ಗುರುವಾರ ಒತ್ತಾಯಿಸಿದೆ.ನಿತ್ಯ ಬಳಕೆಯ ಸಾಮಗ್ರಿಗಳು, ಸಕ್ಕರೆ, ಜವಳಿ ಮತ್ತಿತರ ಬಹಳ ಬೇಡಿಕೆ ಇರುವ ವಸ್ತುಗಳ ಮಾರಾಟದ ಚಟುವಟಿಕೆಯನ್ನು ಗಡಿಯಂಚಿನ ಪ್ರದೇಶಗಳಲ್ಲಿ ಹೆಚ್ಚಿಸಲು ಹಾಗೂ ಇದಕ್ಕೆ ಸಂಬಂಧಿಸಿದ ಎರಡೂ ದೇಶದ ವಾಣಿಜ್ಯೋದ್ಯಮಿಗಳು ಹೆಚ್ಚಿನ ವಹಿವಾಟು ನಡೆಸಲು ಅನುಕೂಲವಾಗುವಂತೆ ಜಂಟಿ ಆರ್ಥಿಕ ವಲಯ ರಚಿಸುವುದು ತುರ್ತು ಅಗತ್ಯ ಎಂದು ಪಿಐಬಿಸಿ ಅಧ್ಯಕ್ಷ ನೂರ್ ಮುಹಮ್ಮದ್ ಕಸೂರಿ ಆಗ್ರಹಿಸಿದರು.ಕೆಲವು ಉಪಯುಕ್ತ ಜತೆಗೆ ತಂತ್ರಜ್ಞಾನ ಮತ್ತು ಕಚ್ಚಾ ಸಾಮಗ್ರಿಗಳನ್ನು ಎರಡೂ ದೇಶಗಳು ವಿನಿಮಯ ಮಾಡಿಕೊಳ್ಳಬೇಕಾದ ಅಗತ್ಯವೂ ಇದೆ ಎಂದು ಅವರು ಸುದ್ದಿಸಂಸ್ಥೆ ಬಳಿ ಹೇಳಿದರು.ಸಿಮೆಂಟ್, ಜವಳಿ, ಪೆಟ್ರೋಲಿಯಂ ಸೇರಿದಂತೆ ವಿವಿಧ ವಾಣಿಜ್ಯ-ಕೈಗಾರಿಕೆಗಳ ಕ್ಷೇತ್ರದ 1000ಕ್ಕೂ ಅಧಿಕ ಉದ್ಯಮಿಗಳು ಪಿಐಬಿಸಿ ಸದಸ್ಯರಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.