ಜಂಬುನಾಥಸ್ವಾಮಿ ಮಹಾರಥೋತ್ಸವ

7

ಜಂಬುನಾಥಸ್ವಾಮಿ ಮಹಾರಥೋತ್ಸವ

Published:
Updated:
ಜಂಬುನಾಥಸ್ವಾಮಿ ಮಹಾರಥೋತ್ಸವ

ಹೊಸಪೇಟೆ: ಸ್ಥಳೀಯ ಪುರಾಣ ಪ್ರಸಿದ್ಧ ಹಾಗೂ ಐತಿಹಾಸಿಕ ಹಿನ್ನೆಲೆಯ ಶ್ರೀಜಂಬುನಾಥ ಸ್ವಾಮಿಯ ಮಹಾ ರಥೋತ್ಸವ ಶನಿವಾರ ಸಂಜೆ ವೈಭವದಿಂದ ನಡೆಯಿತು.

ರಥೋತ್ಸವ ಅಂಗವಾಗಿ ಬೆಳಿಗ್ಗೆ ದೇವಸ್ಥಾನದಲ್ಲಿ ಜಂಬುನಾಥ ಸ್ವಾಮಿಗೆ ವಿಶೇಷ ಪಂಚಾಮೃತಾಭಿಷೇಕ, ಬಿಲ್ವ ಅರ್ಚನೆ ನಡೆದವು. ವಿವಿಧ ಹೂವುಗಳಿಂದ ಸ್ವಾಮಿಯನ್ನು ಅಲಂಕಾರಿಸಲಾಗಿತ್ತು.

ಬೆಳಿಗ್ಗೆ ದೇವಸ್ಥಾನದ ಆವರಣದಲ್ಲಿ ಮಡಿ ತೇರು ಜರುಗಿತು. ಸಂಜೆ ಸ್ವಾಮಿಯ ಧ್ವಜಗಳ ಹರಾಜಿನ ನಂತರ  ಮಹಾ ರಥೋತ್ಸವ ವೈಭವದಿಂದ ಜರುಗಿತು.

ತಾಲ್ಲೂಕಿನ ಕಲ್ಲಳ್ಳಿ, ರಾಜಾಪುರ, ವೆಂಕಟಗಿರಿ, ಕಾಕುಬಾಳು, ಅಮರಾವತಿ ಸೇರಿದಂತೆ ನಗರದ ಸಾವಿರಾರು ಭಕ್ತರು ಭಾಗವಹಿಸಿದ್ದರು.

ವಿವಿಧ ಸಂಘಟನೆಗಳ ಪದಾಧಿಕಾರಿಗಳು ನಗರದಿಂದ ನಾಲ್ಕು ಕಿ.ಮೀ. ದೂರದವರೆಗೆ ರಸ್ತೆಯುದ್ದಕ್ಕೂ ಬಿಸಿಲಿನ ಬೇಗೆ ಕಡಿಮೆ ಮಾಡಲು ಭಕ್ತರಿಗೆ ನೀರು, ಪಾನಕ ವಿತರಿಸುವ ವ್ಯವಸ್ಥೆ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry