ಮಂಗಳವಾರ, ಜೂನ್ 15, 2021
22 °C

ಜಕ್ಕನಹಳ್ಳಿಕೊಪ್ಪಲು ಅಜ್ಜಿಗೆ 104ರಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ತಾಲ್ಲೂಕಿನ ಕಟ್ಟಾಯ ಹೋಬಳಿಯ ಜಕ್ಕನಹಳ್ಳಿ ಕೊಪ್ಪಲಿನ ಆ ಮನೆಯಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು. ಊರ ತುಂಬ ಶುಭಾಷಯ ಕೋರುವ ಬ್ಯಾನರ್ ರಾರಾಜಿಸಿದವು. ಮನೆಯ ಮುಂದೆ ತಳಿರು- ತೋರಣ ಕಂಗೊಳಿಸಿದವು. ಮಂಗಳ ವಾದ್ಯದ ಸದ್ದು ಎಲ್ಲರನ್ನು ಹುಬ್ಬೇರುವಂತೆ ಮಾಡಿತು.-ಇದು ಯಾವುದೂ ಒಂದು ಸರಳ ಸಮಾರಂಭದ ಸನ್ನಿವೇಶವಲ್ಲ. ನೂರು ವರ್ಷ ಪೂರೈಸಿದ ಅಜ್ಜಿಗೆ ಆಕೆಯ ಕುಟುಂಬ ಸದಸ್ಯರು ಹಾಗೂ ಊರಿನ ವರು ಸನ್ಮಾನಿಸಿದ ಪರಿ. ಶತಾಯುಷಿ ಲಕ್ಷ್ಮಮ್ಮರ ಹುಟ್ಟಿದ ದಿನ. ಅವರ ವಯಸ್ಸು ಈಗ ಬರೋಬ್ಬರಿ 104.ಲಕ್ಷ್ಮಮ್ಮ ಅಜ್ಜಿಗೆ 5 ಜನ ಮಕ್ಕಳಲ್ಲಿ 4 ಜನ ಬದುಕ್ಕಿದ್ದು, 22 ಮೊಮ್ಮಕ್ಕಳು, 31 ಜನ ಮೊಮ್ಮಕ್ಕಳು, ಅವರ ಮರಿಮಕ್ಕಳು  ಇದ್ದಾರೆ. ಇವರೆಲ್ಲ ಸೇರಿ 104ನೇ ವರ್ಷ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಇದಕ್ಕೆ ಊರಿನವರು ಸಾಥ್ ನೀಡಿದರು.ಹಾಸನ ತಾಲ್ಲೂಕಿನ ಕಟ್ಟಾಯ ಹೋಬಳಿಯ ಜಕ್ಕನಹಳ್ಳಿ ಕೊಪ್ಪಲಿನ ನಿವಾಸಿ ಲಕ್ಷ್ಮಮ್ಮ 104ನೇ ಹುಟ್ಟು ಹಬ್ಬದ ಅಂಗವಾಗಿ ಶನಿವಾರ ರಾತ್ರಿ ವಿಶೇಷವಾಗಿ ಕನಕಾಭಿಷೇಕ , ಸಹಸ್ರಚಂದ್ರ ದರ್ಶನ ಶಾಂತಿ ಪೂಜೆ ನಡೆದವು. ಭಾನುವಾರ ಬೆಳಿಗ್ಗೆ ಹೋಮ ಹವನ, ಗ್ರಾಮ ದೇವತೆ ಮೆರವಣಿಗೆ ವಿವಿಧ ಧಾರ್ಮಿಕ ಪೂಜೆಗಳು ನಡೆದವು.ನಂತರ ಶತಾಯುಷಿ ಲಕ್ಷ್ಮಮ್ಮ ತನ್ನ ಕುಟುಂಬದ 200 ಸದಸ್ಯರು, ಊರಿನವರೆದುರು ಬೃಹತ್ ಕೇಕ್ ಕತ್ತರಿಸಿ ಸಂತೋಷ ಹಂಚಿಕೊಂಡರು. ನಂತರ ಮನೆತನದ ಸಂಪ್ರದಾಯಕ ತೊಟ್ಟಿಲ್ಲಲ್ಲಿ ಮರಿಮಕ್ಕಳೊಂದಿಗೆ ಕೂತು ಕೆಲಕಾಲ ಸಂಭ್ರಮಿಸಿದ ಅಜ್ಜಿ, ಇಷ್ಟು ವರ್ಷ ತಾನು ಸವೆಸಿದ ಜೀವನದಲ್ಲಿನ ಸಿಹಿ-ಕಹಿ ಘಟನೆಯ ಹಂಚಿಕೊಳ್ಳುವುದನ್ನು ಮರೆಯಲಿಲ್ಲ.`ಅಜ್ಜಿಯು ಸಾಕಷ್ಟು ಬಾರಿ ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುವ ಬಗ್ಗೆ ನಮ್ಮ ಬಳಿ ಹೇಳಿದ್ದರು. ಅದರಂತೆ ಇಂದು ಕುಟುಂಬದ ಏಲ್ಲಾ ಸದಸ್ಯರು ಸೇರಿ ಹುಟ್ಟುಹಬ್ಬ ಆಚರಿಸಿದೆವು~ ಎಂದು ಅಜ್ಜಿಯ ಮೂಮ್ಮಗ ಮಹದೇವಶೆಟ್ಟಿ ಹೇಳಿದರು.`ಅಜ್ಜಿಯ ಹುಟ್ಟುಹಬ್ಬ ಆಚರಿಸುತ್ತಿ ರುವುದು ಸಂತಸ ತಂದಿದೆ. ಈ ರೀತಿಯ ಸಮಾರಂಭದಿಂದ ಸಾಮರಸ್ಯ ಮೂಡು ತ್ತದೆ. ಎಂದು ಅಜ್ಜಿಯ ಮರಿಮೊಮ್ಮ ಗಳಾದ ಬೀನಾ ಅನಿಸಿಕೆ ಹಂಚಿ ಕೊಂಡರು. ಅಜ್ಜಿಯ ಹುಟ್ಟುಹಬ್ಬಕ್ಕೆ ಆಗಮಿಸಿದವರಿಗೆ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.