ಗುರುವಾರ , ಏಪ್ರಿಲ್ 22, 2021
23 °C

ಜಗತ್ತಿಗೆ ವಿಶ್ವ ಸಂದೇಶ ನೀಡಿದ ಕುವೆಂಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುರುಮಠಕಲ್: ಕನ್ನಡ ಸಾಹಿತ್ಯ ಲೋಕಕ್ಕೆ ಪ್ರಥಮ ಜ್ಞಾನ ಪೀಠ ಪ್ರಶಸ್ತಿ ತಂದು ಕೊಟ್ಟ ಮಹಾನ್ ದಾರ್ಶನಿಕ ಹಾಗೂ ವಿಶ್ವಕ್ಕೆ ವಿಶ್ವ ಸಂದೇಶ ನೀಡಿದವರು ಕುವೆಂಪು ಎಂದು ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮಿಗಳು ಅಭಿಪ್ರಾಯಪಟ್ಟರು.ಅವರು ಬುಧವಾದ ಇಲ್ಲಿನ ಖಾಸಾಮಠದ ಸಂಗಮೇಶ್ವರ ಪ್ರೌಢ ಶಾಲೆಯ ಆವರಣದಲ್ಲಿ ಯಾದಗಿರಿ ಜಿಲ್ಲಾ ಸಾಹಿತ್ಯ ಪರಿಷತ್ತು ಹಾಗೂ ಸುರಪುರದ ಸಗರನಾಡು ಸೇವಾ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಲಾದ `ಗಡಿ ನಾಡಿನಲ್ಲಿ ಜ್ಞಾನ ಪೀಠ ಗಾರುಡಿಗರ ದರ್ಶನ~ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕುವೆಂಪು ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ ಜನಿಸಿ ಸಹ್ಯಾದ್ರಿ ಪರ್ವತದ ವಾತಾವರಣದಲ್ಲಿ ಬೆಳೆದರು. ಆರಂಭದಲ್ಲೇ ಇಂಗ್ಲಿಷ್ ಸಾಹಿತ್ಯಕ್ಕೆ ಮಾರು ಹೋದ ಅವರು ಗುರುಗಳ ಪ್ರೇರಣೆಯಿಂದ ಕನ್ನಡ ಬರೆಯಲಾರಂಭಿಸಿ ಕನ್ನಡ ಸಾಹಿತ್ಯ ಲೋಕದ ಶ್ರೇಷ್ಟ ಕವಿಗಳಾಗಿ ಹೊರಹೊಮ್ಮಿದರು ಎಂದು ಸೇಡಂನ ಸಾಹಿತಿ ಮುಡಬಿ ಗುಂಡೆರಾವ ತಿಳಿಸಿದರು.ಕುವೆಂಪು ರಚಿಸಿದ ನಾಡಗೀತೆ ಮತ್ತು ರೈತ ಗೀತೆ ಇಂದು ಜನ ಮನ ಸೂರೆ ಗೊಂಡಿದೆ, ಶ್ರೀ ರಾಮಾಯಣ ದರ್ಶನಂ, ಎಂಬ ಮಹಾಕಾವ್ಯವನ್ನು ರಚಿಸಿ ಜ್ಞಾನ ಪೀಠ ಪ್ರಶಸ್ತಿಗೆ ಪಾತ್ರರಾದರು ಎಂದು ಹೇಳಿದರು.

ಗುರುಮಠಕಲ್ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರೌಢ ಶಾಲೆಗಳಲ್ಲಿ ಈ ತಿಂಗಳ 31ರ ವರೆಗೆ ಕಾರ್ಯಕ್ರಮ ಜರುಗಲಿದೆ, ಈ ಕಾರ್ಯಕ್ರಮಗಳಲ್ಲಿ ಜ್ಞಾನ ಪೀಠ ಪುರಸ್ಕೃತರ ಪರಿಚಯ ಮಾಡಿಸಲಾಗುವುದು ಎಂದು ಸುರಪುರದ ಸಗರನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನಳ್ಳಿ ಪ್ರಾಸ್ತಾವಿಕ ಮಾತನಾಡಿ ತಿಳಿಸಿದರು.ಕಸಾಪ ಜಿಲ್ಲಾ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ನಿವೃತ್ತ ಶಿಕ್ಷಕ ಬಸವರಾಜ ಬೂದಿ, ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷ ಅಯ್ಯಣ್ಣ ಹುಂಡೇಕರ್, ವಲಯ ಅಧ್ಯಕ್ಷ ಡಾ. ಭೀಮಾಶಂಕರ ಮುತ್ತಗಿ ವೇದಿಕೆಯಲ್ಲಿದ್ದರು.ಬಸವರಾಜ ಮೋಟ್ನಳ್ಳಿ, ಬಸವಂತರಾಯ ಗೌಡ ಮಾಲಿ ಪಾಟೀಲ್, ಬಸರೆಡ್ಡಿ ಪಾಟೀಲ್ ಎಂ.ಟಿ. ಪಲ್ಲಿ, ನುರುಂದಪ್ಪ ಲೇವಡಿ, ದೇವರಾಜ ವರ್ಕನಳ್ಳಿ, ಮಲ್ಲೇಶಿ ಕುರುಕುಂದಿ ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು. ಶಿಕ್ಷಕ ಶಿವಾನಂದ ಗೋಗಿ ಸ್ವಾಗತಿಸಿದರು, ವಿರೇಂದ್ರ ನಾಯಕ ವಂದಿಸಿದರು, ಶಾಂತವೀರಯ್ಯ ಪತ್ರಿಮಠ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.