ಜಗತ್ತು ಮರೆಸುವ ಮಹಿಳಾ ಹರಟೆ...
ಲಂಡನ್ (ಪಿಟಿಐ): ಮಹಿಳೆಯರ ಹರಟೆಯನ್ನು ಕಿವಿಗೊಟ್ಟು ಆಲಿಸುವಾಗ ಸುತ್ತಲ ಪ್ರಪಂಚದ ಪರಿವೆಯೇ ಇರುವುದಿಲ್ಲ ಎಂಬುದು ಸಂಶೋಧನೆಯೊಂದರಿಂದ ದೃಢಪಟ್ಟಿದೆ.
ಮಹಿಳೆಯರ ಸಂಭಾಷಣೆಗೆ ಕಿವಿಯಾದ ವೇಳೆ ಸುಮಾರು ಶೇ 70ರಷ್ಟು ಜನರಲ್ಲಿ ಈ `ತೀವ್ರ ಮಗ್ನತೆ~ ಕಂಡುಬಂದಿದೆ ಎಂದು ಈ ಕುರಿತು ಸಂಶೋಧನೆ ನಡೆಸಿದ ಲಂಡನ್ ವಿಶ್ವವಿದ್ಯಾಲಯದ ರಾಯಲ್ ಹಾಲೊವೆ ತಜ್ಞರು ಹೇಳಿದ್ದಾರೆ.
ಪುರುಷರಿಬ್ಬರು ಹಾಗೂ ಮಹಿಳೆಯರಿಬ್ಬರ ನಡುವಿನ ಸಂಭಾಷಣೆಗಳನ್ನು ಪ್ರತ್ಯೇಕವಾಗಿ ಧ್ವನಿಮುದ್ರಿಸಿ, ಆಯ್ದ ಹಲವರಿಗೆ ಅದನ್ನು ಕಿವಿಗೊಟ್ಟು ಆಲಿಸಲು ಸೂಚಿಸಲಾಯಿತು. ಈ ಎರಡೂ ಸಂಭಾಷಣೆಗಳ ಮಧ್ಯೆ, ವ್ಯಕ್ತಿಯೊಬ್ಬ `ನಾನು ಗೊರಿಲ್ಲಾ~ ಎನ್ನುವ ಧ್ವನಿ ತುಣುಕೂ ಇತ್ತು.
ಮಹಿಳೆಯರ ಸಂಭಾಷಣೆ ಆಲಿಸಿದ ಶೇ 70ರಷ್ಟು ಜನರಿಗೆ `ನಾನು ಗೊರಿಲ್ಲಾ~ ಎಂಬ ಧ್ವನಿ ಕೇಳಿಸಿರಲೇ ಇಲ್ಲ. ಆದರೆ ಪುರುಷರ ಸಂಭಾಷಣೆ ನಡುವಿನ ಈ ಧ್ವನಿ ತುಣುಕು ಬಹುತೇಕರ ಕಿವಿಗೆ ಬಿದ್ದಿತ್ತು ಎಂದು ಸಂಶೋಧಕರು ವಿವರಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.