ಜಗನ್‌ ಕಸ್ಟಡಿ ಮತ್ತೆ ವಿಸ್ತರಿಸಿದ ನ್ಯಾಯಾಲಯ

7

ಜಗನ್‌ ಕಸ್ಟಡಿ ಮತ್ತೆ ವಿಸ್ತರಿಸಿದ ನ್ಯಾಯಾಲಯ

Published:
Updated:

ಹೈದರಾಬಾದ್‌ (ಪಿಟಿಐ): ಆದಾಯಕ್ಕೆ ಮೀರಿದ ಆಸ್ತಿ ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಎಸ್‌ ಆರ್‌ ಕಾಂಗ್ರೆಸ್‌ ಮುಖ್ಯಸ್ಥ, ಕಡಪಾ ಕ್ಷೇತ್ರದ ಸಂಸದ ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ ಹಾಗೂ ಇತರರ ನ್ಯಾಯಾಂಗ ಬಂಧನ ಅವಧಿಯನ್ನು ಸಿಬಿಐ ಕೋರ್ಟ್ ಅಕ್ಟೋಬರ್‌ 3ರವರೆಗೆ ವಿಸ್ತರಿಸಿದೆ.ಜಗನ್‌, ಅವರ ಲೆಕ್ಕಪರಿಶೋಧಕ ವಿಜಯ್‌ ಸಾಯಿ ರೆಡ್ಡಿ, ಉದ್ಯಮಿ ನಿಮ್ಮಗಡ್ಡ ಪ್ರಸಾದ್‌ ಹಾಗೂ ಅಧಿಕಾರಿ ಕೆ.ವಿ. ಬ್ರಹ್ಮಾನಂದ ರೆಡ್ಡಿ ಅವರನ್ನು ಇಲ್ಲಿಯ ಚಂಚಲಗಡ ಕೇಂದ್ರ ಕಾರಾಗೃಹದಲ್ಲಿ ಇರಿಸ ಲಾಗಿದೆ. ಭ್ರಷ್ಟಾಚಾರ ಪ್ರಕರಣದಡಿ ಕಳೆದ ವರ್ಷದ ಮೇ 27 ರಂದು ಸಿಬಿಐ ಜಗನ್‌ ಅವರನ್ನು ಬಂಧಿಸಿದೆ.ಈತನಕ ಜಗನ್‌ ಹಾಗೂ ಇತರರ ವಿರುದ್ಧ ಸಿಬಿಐ ಹತ್ತು ಆರೋಪ ಪಟ್ಟಿ ಸಲ್ಲಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry