ಜಗನ್‌, ಶ್ರೀನಿವಾಸನ್‌ ಸಿಬಿಐ ಕೋರ್ಟ್ ಗೆ ಹಾಜರು

7

ಜಗನ್‌, ಶ್ರೀನಿವಾಸನ್‌ ಸಿಬಿಐ ಕೋರ್ಟ್ ಗೆ ಹಾಜರು

Published:
Updated:

ಹೈದರಾಬಾದ್‌ (ಪಿಟಿಐ): ಅಕ್ರಮ ಹೂಡಿಕೆ ಪ್ರಕರಣಗಳಿಗೆ ಸಂಬಂಧಿಸಿ ವೈಎಸ್‌ಆರ್‌ ಕಾಂಗ್ರೆಸ್‌ನ ಅಧ್ಯಕ್ಷ  ಹಾಗೂ ಕಡಪ ಸಂಸದ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ಹಾಗೂ ಬಿಸಿಸಿಐ ಮುಖ್ಯಸ್ಥ ಹಾಗೂ ಇಂಡಿಯಾ ಸಿಮೆಂಟ್ಸ್ ವ್ಯವಸ್ಥಾಪಕ ನಿರ್ದೇಶಕ ಎನ್‌. ಶ್ರೀನಿವಾಸನ್‌ ಅವರು ಇಲ್ಲಿಯ ಸಿಬಿಐ ವಿಶೇಷ ಕೋರ್ಟ್ ಗೆ ಶುಕ್ರವಾರ ಹಾಜರಾದರು.ಆರೋಪ ಪಟ್ಟಿಯಲ್ಲಿ ಹೆಸರಿಸಲಾದ ಜಗನ್‌ ಅವರ ಹಣಕಾಸು ಸಲಹೆಗಾರ ವಿ. ವಿಜಯ್‌ ಸಾಯಿ ರೆಡ್ಡಿ, ಉದ್ಯಮಿ ನಿಮ್ಮಗಡ್ಡ ಪ್ರಸಾದ್‌, ಪೆನ್ನಾ ಸಿಮೆಂಟ್ ಪ್ರವರ್ತಕ ಪಿ. ಪ್ರತಾಪ್‌ ರೆಡ್ಡಿ, ಇಂದು ಸಮೂಹ ಸಂಸ್ಥೆಯ ಅಧ್ಯಕ್ಷ ಶ್ಯಾಂಪ್ರಸಾದ್‌ ರೆಡ್ಡಿ ಹಾಗೂ ಕೆಲ ಐಎಎಸ್‌ ಅಧಿಕಾರಿಗಳು ಸಹ ಹಾಜರಾದರು.ಪ್ರಕರಣದಲ್ಲಿ ಹೆಸರಿಸಲಾದ ಆಂಧ್ರದ ಬೃಹತ್‌ ಕೈಗಾರಿಕೆ ಸಚಿವೆ ಗೀತಾ ರೆಡ್ಡಿ, ಮಾಜಿ ಸಚಿವರಾದ ಸಬಿತಾ ಇಂದ್ರಾ ರೆಡ್ಡಿ, ಧರ್ಮನ ಪ್ರಸಾದ್‌ ರಾವ್‌ ಹಾಗೂ ಮೋಪಿದೇವಿ ವೆಂಕಟರಮಣ ರಾವ್‌ ಕೋರ್ಟ್ ಗೆ ಹಾಜರಾಗಲಿಲ್ಲ. ಆದರೆ ಅವರ ಪರ ವಕೀಲರು ಉಪಸ್ಥಿತರಿದ್ದರು.ಪ್ರಕರಣದ ಮುಂದಿನ ವಿಚಾರಣೆಯನ್ನು ಕೋರ್ಟ್ ಫೆ.12ಕ್ಕೆ ಮುಂದೂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry