ಸೋಮವಾರ, ಜೂನ್ 21, 2021
30 °C

ಜಗನ್ ಆಸ್ತಿ: ಅಧಿಕಾರಿಗಳಿಗೆ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ/ಹೈದರಾಬಾದ್(ಪಿಟಿಐ): ಸಂಸದ ಮತ್ತು ವೈಎಸ್‌ಆರ್ ಕಾಂಗ್ರೆಸ್ ಮುಖಂಡ ವೈ. ಜಗನ್ಮೋಹನ ರೆಡ್ಡಿ ಅವರ ಅಕ್ರಮ ಆಸ್ತಿ ಸಂಪಾದನೆಗೆ ಸಹಕರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಆರು ಸಚಿವರಿಗೆ ಮತ್ತು ಎಂಟು ಐಎಎಸ್ ಅಧಿಕಾರಿಗಳಿಗೆ ಸುಪ್ರಿಂಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ವೈ. ಎಸ್. ರಾಜಶೇಖರ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗ ಈ 6 ಜನರು ಸಚಿವರಾಗಿದ್ದರು ಮತ್ತು 8 ಐಎಎಸ್ ಅಧಿಕಾರಿಗಳು ಪ್ರಮುಖ ಹುದ್ದೆಯಲ್ಲಿದ್ದರು. ಇವರ ಬಗ್ಗೆ ಅಗತ್ಯ ಸಾಕ್ಷಿಗಳಿದ್ದರೂ ಸಿಬಿಐ ವಿಚಾರಣೆ ನಡೆಸುತ್ತಿಲ್ಲ ಎಂದು ವಕೀಲ ಸುಧಾಕರ ರೆಡ್ಡಿ ಸಲ್ಲಿಸಿದ ಮನವಿಗೆ ಕೋರ್ಟ್ ಈ ನೋಟಿಸ್ ಜಾರಿಗೊಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.