ಶನಿವಾರ, ಮೇ 28, 2022
27 °C

ಜಗನ್ ಆಸ್ತಿ ಪ್ರಕರಣ: ಸಿಬಿಐನಿಂದ ಮತ್ತೊಮ್ಮೆ ಎನ್. ಶ್ರೀನಿವಾಸನ್ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಐಎಎನ್ಎಸ್): ವೈಎಸ್‌ಆರ್ ಕಾಂಗ್ರೆಸ್ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಶನಿವಾರ ಮತ್ತೊಮ್ಮೆ ಬಿಸಿಸಿಐ ಅಧ್ಯಕ್ಷ, ಇಂಡಿಯಾ ಸಿಮೆಂಟ್ ವ್ಯವಸ್ಥಾಪಕ ನಿರ್ದೇಶಕ ಎನ್. ಶ್ರೀನಿವಾಸನ್ ಅವರನ್ನು ವಿಚಾರಣೆಗೆ ಒಳಪಡಿಸಿತು.

ಸಿಬಿಐ ತಂಡದಿಂದ ಒಂದೇ ವಾರದಲ್ಲಿ ಎರಡನೇ ವಿಚಾರಣೆ ಇದಾಗಿದೆ. ಸಿಬಿಐ ಅಧಿಕಾರಿಗಳ ತನಿಖಾ ತಂಡವು ಇಲ್ಲಿನ ದಿಲ್‌ಕುಷ್ ಅತಿಥಿ ಗೃಹದಲ್ಲಿ  ಶ್ರಿನಿವಾಸನ್ ಅವರನ್ನು ವಿಚಾರಣೆಗೆ ಒಳಪಡಿಸಿತು. ಬೆಳಿಗ್ಗೆ 11ಕ್ಕೆ ಆರಂಭವಾದ ವಿಚಾರಣೆಯು ಮಧ್ಯಾಹ್ನದ ನಂತರವೂ ಮುಂದುವರೆದಿತ್ತು.

ಸಿಬಿಐ ತನಿಖಾ ತಂಡವು ಜೂನ್ 18ರಂದು ಸುಮಾರು 7 ಗಂಟೆಗಳ ಕಾಲ ಶ್ರೀನಿವಾಸನ್ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.