ಮಂಗಳವಾರ, ಜೂನ್ 15, 2021
21 °C

ಜಗನ್ ಆಸ್ತಿ : ಸಚಿವರು, ಅಧಿಕಾರಿಗಳಿಗೆ ಸುಪ್ರೀಂ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಅವರು ಅಕ್ರಮ ಆಸ್ತಿ ಗಳಿಸಲು, ಸಚಿವರು ಮತ್ತು ಅಧಿಕಾರಿಗಳು  ಸಹಕರಿಸಿದ್ದರೆಂಬ ಸಾಕ್ಷ್ಯಾಧಾರಗಳಿದ್ದರೂ, ಸಿಬಿಐ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ವಕೀಲರೊಬ್ಬರು ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು.ಅವರ ಅರ್ಜಿಯನ್ನು ಪುರಸ್ಕರಿಸಿದ  ಸುಪ್ರೀಂ ಕೋರ್ಟ್, ಸೋಮವಾರ ಆಂಧ್ರಪ್ರದೇಶ ಸರ್ಕಾರದ ಆರು ಜನ ಸಚಿವರು ಸೇರಿದಂತೆ 8 ಜನ ಐಎಎಸ್ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದೆ. ವಕೀಲ ಸುಧಾಕರ ರೆಡ್ಡಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಬಲವೀರ್ ಭಂಡಾರಿ ಅವರನ್ನೊಳಗೊಂಡ ಪೀಠವು, ಆರು ಜನ ಸಚಿವರಿಗೆ ಹಾಗೂ ಎಂಟು ಜನ ಐಎಎಸ್ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದೆ.ಜಗನ್ ಅವರು ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಸಚಿವರು ಹಾಗೂ 8 ಜನ ಐಎಸ್ ಅಧಿಕಾರಿಗಳು ಮಾಜಿ ಮುಖ್ಯಮಂತ್ರಿ ದಿ. ವೈ.ಎಸ್. ರಾಜಶೇಖರ ರೆಡ್ಡಿ ಅವರ ಅಧಿಕಾರದ ಅವಧಿಯಲ್ಲಿ ಪ್ರಮುಖ ಸ್ಥಾನದಲ್ಲಿದ್ದು ಕೊಂಡು ಜಗನ್ ಗೆ ಸಹಕರಿಸಿದ್ದರು ಎಂದು ವಕೀಲ ಸುಧಾಕರ ರೆಡ್ಡಿ ಅವರು ಆರೋಪಿಸಿದ್ದರು.

ಜಗನ್ ಅವರಿಗೆ ಸಹಕರಿಸಿದ ಹಲವರ ವಿರುದ್ದ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ಸಿಬಿಐ, ಈ 14 ಮಂದಿಯ ಮೇಲೆ ದೂರು ದಾಖಲಿಸಿಕೊಂಡಿಲ್ಲ ಎಂದೂ ವಕೀಲ ಸುಧಾಕರ ರೆಡ್ಡಿ ಅವರು ತಮ್ಮ ಅರ್ಜಿಯಲ್ಲಿ ದೂರಿದ್ದರು. 

.ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.