ಭಾನುವಾರ, ಅಕ್ಟೋಬರ್ 20, 2019
27 °C

ಜಗನ್ ಜಾಥಾ ಮೇಲೆ ಮೊಟ್ಟೆ ಎಸೆತ

Published:
Updated:

ಹೈದರಾಬಾದ್: ಕಡಪಾ ಸಂಸದ ಮತ್ತು ವೈಎಸ್‌ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ನೇತೃತ್ವದ ಜಾಥಾದ ಮೇಲೆ ತೆಲಂಗಾಣ ಪರ ಚಳವಳಿಯ ಮಹಿಳಾ ಕಾರ್ಯಕರ್ತೆಯರು  ಮೊಟ್ಟೆ ಮತ್ತು ಟೊಮೆಟೊಗಳನ್ನು ಎಸೆದು ಪ್ರತಿಭಟನೆ ನಡೆಸಿದರು.

ಜಗನ್ ನೇತೃತ್ವದ ಜಾಥಾವು ಮಂಗಳವಾರ ನಿಜಾಮಾಬಾದ್ ಜಿಲ್ಲೆಯ ವಿನಾಯಕ ನಗರದ ಬಳಿ ಬಂದಾಗ ಈ ಘಟನೆ ನಡೆದಿದ್ದು, 15 ಮಂದಿ ಕಾರ್ಯಕರ್ತೆಯರನ್ನು ಪೊಲೀಸರು ಬಂಧಿಸಿದ್ದಾರೆ.

Post Comments (+)