ಜಗನ್ ನ್ಯಾಯಾಂಗ ಬಂಧನ ಡಿ. 19ರವರೆಗೆ ವಿಸ್ತರಣೆ

7

ಜಗನ್ ನ್ಯಾಯಾಂಗ ಬಂಧನ ಡಿ. 19ರವರೆಗೆ ವಿಸ್ತರಣೆ

Published:
Updated:

ಹೈದರಾಬಾದ್ (ಪಿಟಿಐ) : ಅಕ್ರಮ ಆಸ್ತಿ ಸಂಪಾದನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ವೈ ಎಸ್‌ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈ. ಎಸ್. ಜಗನ್‌ಮೋಹನ್ ರೆಡ್ಡಿ ಹಾಗು ಇತರೆ ಆರೋಪಿಗಳ ನ್ಯಾಯಾಂಗ ಬಂಧನವನ್ನು ಡಿಸೆಂಬರ್ 19ರವರೆಗೆ ವಿಸ್ತರಿಸಿ ಸಿಬಿಐ ವಿಶೇಷ ನ್ಯಾಯಾಲಯವು ಬುಧವಾರ ಆದೇಶ ನೀಡಿತು.

ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಚಂಚಲಗುಡ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ಜಗನ್‌ಮೋಹನ್ ರೆಡ್ಡಿ ಸೇರಿದಂತೆ ಮಾಜಿ ಆಂಧ್ರ ಸಚಿವ ಮೋಪಿದೇವಿ ವೆಂಕ ರಮಣ ರಾವ್, ಉದ್ಯಮಿ ನಿಮ್ಮಗಡ್ಡ ಪ್ರಸಾದ್ ಮತ್ತು ಉಳಿದವರನ್ನು ಹೆಚ್ಚಿನ ಭದ್ರತೆಯೊಂದಿಗೆ ಸಿಬಿಐ ಪ್ರಕರಣಗಳ ಪ್ರಥಮ ಹೆಚ್ಚುವರಿ ವಿಶೇಷ ನ್ಯಾಯಾಧೀಶರ  ಎದುರು ಹಾಜರುಪಡಿಸಲಾಯಿತು.

ವಿಚಾರಣೆ ನಡೆಸಿದ ಕೋರ್ಟ್ ಆರೋಪಿಗಳ ನ್ಯಾಯಾಂಗ ಬಂಧನವನ್ನು14 ದಿನಗಳ ವರೆಗೆ ವಿಸ್ತರಿಸಿತು.

ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ಆಂಧ್ರ ಸಚಿವ ಧ್ರಮಣ ಪ್ರಸಾದ್ ರಾವ್ ಸಹ ನ್ಯಾಯಾಲಯದ ಎದುರು ಹಾಜರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry