ಬುಧವಾರ, ನವೆಂಬರ್ 20, 2019
22 °C

ಜಗನ್ ಪ್ರಕರಣ: ಇನ್ನಷ್ಟು ಇಕ್ಕಟ್ಟಿನಲ್ಲಿ ಆಂಧ್ರ ಸರ್ಕಾರ

Published:
Updated:

ಹೈದರಾಬಾದ್(ಐಎಎನ್‌ಎಸ್): ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕ ವೈ.ಎಸ್.ಜಗನ್‌ಮೋಹನ್ ರೆಡ್ಡಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣವು ಆಂಧ್ರದ ಕಾಂಗ್ರೆಸ್  ಸರ್ಕಾರವನ್ನು ಬೆಂಬಿಡದೆ ಕಾಡುತ್ತಿದೆ.ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಕೋರ್ಟ್‌ಗೆ ಸಲ್ಲಿಸಿದ 5ನೇ ಆರೋಪ ಪಟ್ಟಿಯಲ್ಲಿ ಗೃಹ ಸಚಿವೆ ಸಬಿತಾ ಇಂದ್ರಾ ರೆಡ್ಡಿ  ಹೆಸರು ಇದೆ. ಇವರ ವಿರುದ್ಧ ವಂಚನೆ, ಅಪರಾಧ ಪಿತೂರಿ ಹಾಗೂ ಪ್ರಭಾವ ಬಳಸಿ ದಾಲ್ಮಿಯಾ ಸಿಮೆಂಟ್ ಕಂಪೆನಿಗೆ ಸುಣ್ಣದಕಲ್ಲು ಗಣಿ ಹಂಚಿಕೆ ಮಾಡಿದ ಆರೋಪ ಹೊರಿಸಲಾಗಿದೆ. ಸಿ.ಎಂ. ಕಿರಣ್ ಕುಮಾರ್ ರೆಡ್ಡಿ ಸರ್ಕಾರದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತ 3ನೇ ಮಂತ್ರಿ ಸಬಿತಾ ಇಂದ್ರಾ ರೆಡ್ಡಿ.  

ಪ್ರತಿಕ್ರಿಯಿಸಿ (+)