ಜಗನ್ ವಿಚಾರಣೆ: ಕೋರ್ಟ್‌ಗೆ ಜಾರಿ ನಿರ್ದೇಶನಾಲಯ ಮೊರೆ

7

ಜಗನ್ ವಿಚಾರಣೆ: ಕೋರ್ಟ್‌ಗೆ ಜಾರಿ ನಿರ್ದೇಶನಾಲಯ ಮೊರೆ

Published:
Updated:
ಜಗನ್ ವಿಚಾರಣೆ: ಕೋರ್ಟ್‌ಗೆ ಜಾರಿ ನಿರ್ದೇಶನಾಲಯ ಮೊರೆ

ಹೈದರಾಬಾದ್ (ಐಎಎನ್‌ಎಸ್): ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಕಡಪಾ ಸಂಸದ ವೈ.ಎಸ್.ಜಗನ್‌ಮೊಹನ್ ರೆಡ್ಡಿ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವ ಜಾರಿ ನಿರ್ದೇಶನಾಲಯವು (ಇ.ಡಿ), ಜಗನ್ ವಿಚಾರಣೆ ನಡೆಸಲು ಅನುಮತಿ ನೀಡಬೇಕೆಂದು ಕೋರಿ  ಬುಧವಾರ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.

 

ದೆಹಲಿಯಿಂದ ಹೈದರಾಬಾದ್‌ಗೆ ಆಗಮಿಸಿರುವ ಇ.ಡಿ ಅಧಿಕಾರ ತಂಡವೊಂದು ಸ್ಥಳೀಯ ಅಧಿಕಾರಿಗಳ  ಜತೆಗೂಡಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಹಿತಿಗಳನ್ನು ಕಲೆಹಾಕುತ್ತಿದ್ದು, ಸಿಬಿಐ ಅಧಿಕಾರಿಗಳ ಸಹಾಯ ಕೂಡ ಪಡೆಯುತ್ತಿದೆ.

ಅಕ್ರಮ ಸಂಪಾದನೆ ನಿಗ್ರಹ ಕಾಯ್ದೆ (ಪಿಎಂಎಲ್‌ಎ) ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯನ್ನು (ಎಫ್‌ಇಎಮ್‌ಎ) ಜಗನ್ ಅವರು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿರುವ ಇ.ಡಿ ಅವರನ್ನು ಪ್ರಶ್ನಿಸಲು ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಮೊರೆ ಹೋಗಿದೆ.

 

ಜಗನ್ ಹಾಗೂ ಅವರ ಆಪ್ತರು ಸೇರಿದಂತೆ ಕೆಲ ಅಧಿಕಾರಿಗಳ ವಿರುದ್ಧ ಈಗಾಗಲೇ ಈ ಎರಡು ಕಾಯ್ದೆಗಳಡಿ ದೂರು ದಾಖಲಿಸಿದೆ.ವಿದೇಶಗಳಲ್ಲಿ ಜಗನ್ ಹಾಗೂ ಅವರ ಒಡೆತನದ ಕಂಪೆನಿಗಳ ಬಂಡವಾಳ ಹೂಡಿರುವ ಹಾಗೂ ಹಣಕಾಸು ವ್ಯವಹಾರ ನಡೆಸಿರುವ ಕುರಿತಂತೆ ಇ.ಡಿ ಅಧಿಕಾರಿಗಳು ವಿಚಾರಣೆ ನಡೆಸಲಿರುವುದರಿಂದ ಜಗನ್ ಅವರ ಕಾರಾಗೃಹ ವಾಸ ಮುಂದುವರಿಯುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry