ಜಗವ ಚುಂಬಿಸು

7
ಮೊದಲ ಓದು

ಜಗವ ಚುಂಬಿಸು

Published:
Updated:

ಮ್ಯಾನೇಜ್‌ಮೆಂಟ್ ಪುಸ್ತಕಗಳ ಬಹುಬೇಡಿಕೆಯ ಲೇಖಕ, ಸಾಫ್ಟ್‌ವೇರ್ ಕಂಪನಿ ಮೈಂಡ್‌ಟ್ರೀ ಸಹಸ್ಥಾಪಕ ಸುಬ್ರೊತೊ ಬಾಗ್ಚಿ ಅವರ ಅನುಭವ ಕಥನ `ಜಗವ ಚುಂಬಿಸು'.

ಈ ಕೃತಿಯನ್ನು ವಂದನಾ ಪಿ.ಸಿ. ಕನ್ನಡಕ್ಕೆ ಅನುವಾದಿಸಿದ್ದಾರೆ. ಮ್ಯಾನೇಜ್‌ಮೆಂಟ್ ಎನ್ನುವುದು ಹಣ ಮತ್ತು ಕೀರ್ತಿ ಗಳಿಕೆಗೆ ದಾರಿಯಾಗಿರುವ, ಉದ್ಯಮವನ್ನು ಮುನ್ನಡೆಸುವ ಅತ್ಯಂತ ಕುತೂಹಲದ ಹಾಗೂ ಆಸಕ್ತಿಕರ ವಿಷಯ.

ಈ ದಿಸೆಯಲ್ಲಿ ಸುಬ್ರೊತೊ ಅವರ ಪುಸ್ತಕ ಈ ರಂಗದಲ್ಲಿನ ಹಲವು ನೋಟಗಳನ್ನು, ಮಜಲುಗಳನ್ನು ಪರಿಚಯಿಸುತ್ತದೆ.ಇದಕ್ಕೆ ಮ್ಯಾನೇಜ್‌ಮೆಂಟ್‌ನ ಪರಿಭಾಷೆಗಳ ಭಾರವಿಲ್ಲ.

ಲೇಖಕರು ತಮ್ಮ ವಿಸ್ತಾರವಾದ ಅನುಭವದ ಬೆಳಕಿನಲ್ಲಿ ಹೊಸ ಲೋಕವೊಂದನ್ನು ಪರಿಚಯಿಸುತ್ತಾ ಹೋಗುತ್ತಾರೆ. ಅದರಲ್ಲಿ ಬಹುವಾಗಿ ಕಾಡುವುದು ಅವರ ಬಾಲ್ಯ ಮತ್ತು ಅವರಿಗೆ ಭಾವನಾತ್ಮಕವಾಗಿ ಬೆಂಬಲಕ್ಕೆ ನಿಂತ ತಂದೆ ತಾಯಿ ಮತ್ತವರ ಕುಟುಂಬ.ವ್ಯವಹಾರದಲ್ಲಿನ ಕುಶಲತೆ, ಅಧ್ಯಯನ, ಮಹತ್ವಾಕಾಂಕ್ಷೆ, ಶ್ರಮ, ಮುಂಗಾಣ್ಕೆಗಳಿಂದಾಗಿ ಹಳ್ಳಿಯ ಸಾಮಾನ್ಯ ಹುಡುಗನೊಬ್ಬ ಬೆಳೆದುಬಂದ ಪರಿಯ ದಾಖಲೆ ಇದು.

ಸಾಫ್ಟ್‌ವೇರ್ ಕಂಪನಿಯನ್ನು ಕಟ್ಟಿದರೂ ಸುಬ್ರೊತೊ ಓದಿದ್ದು ರಾಜ್ಯಶಾಸ್ತ್ರವನ್ನು, ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದು ಸರ್ಕಾರಿ ಇಲಾಖೆಯಲ್ಲಿ ಗುಮಾಸ್ತರಾಗಿ.

ಹಲವು ಕಂಪನಿಗಳಲ್ಲಿ ಕೆಲಸ ಮಾಡಿದ ಅವರ ಈ ನಿರೂಪಣೆಯಲ್ಲಿ ಗೆದ್ದವನ ಅಹಂಕಾರ ಕಾಣಿಸುವುದಿಲ್ಲ, ಹೋರಾಟ, ಪ್ರಯತ್ನದಿಂದ ಎಲ್ಲವನ್ನೂ ಗೆಲ್ಲಬಲ್ಲೆ ಎಂಬ ವಿಶ್ವಾಸ ಕಾಣಿಸುತ್ತದೆ. ಹಾಗಾಗಿ ಈ ಬರಹ ಓದುಗರಿಗೆ ಹೊಸ ಸ್ಫೂರ್ತಿಯನ್ನು ನೀಡಬಲ್ಲದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry