ಬುಧವಾರ, ಫೆಬ್ರವರಿ 24, 2021
23 °C

ಜಚನಿ ಸ್ಮರಣೆ: ವಿದ್ಯಾರ್ಥಿಗಳಿಗೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಚನಿ ಸ್ಮರಣೆ: ವಿದ್ಯಾರ್ಥಿಗಳಿಗೆ ಸನ್ಮಾನ

ವಿಜಯಪುರ:  `ಕೂಡಿಟ್ಟ ಹಣದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನ ಮಾಡುವುದಕ್ಕೆ ಪ್ರೇರೇಪಣೆ ನೀಡಿದ ಗೌರವ ನಮಗೆ ಸರಳವಾಗಿ ಬದುಕಲು ಕಲಿಸಿಕೊಟ್ಟ ನಮ್ಮ ಹಿರಿಯರಿಗೆ ಸಲ್ಲುತ್ತದೆ' ಎಂದು ವೀರೇಶ್ವರ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಸಿ.ಎಂ.ವೀರಣ್ಣ ಹೇಳಿದರು.ಪಟ್ಟಣದ ನಗರೇಶ್ವರ ಪ್ರಾರ್ಥನಾ ಮಂದಿರದಲ್ಲಿ ವೀರೇಶ್ವರ ಚಾರಿಟಬಲ್ ಟ್ರಸ್ಟ್, ವೀರಭದ್ರ ಸ್ವಾಮಿ ಗೋಷ್ಠಿ ಮತ್ತು ಅಕ್ಕನ ಬಳಗದ ವತಿಯಿಂದ ಏರ್ಪಡಿಸಿದ್ದ 250ನೇ ಶಿವಾನುಭವ ಗೋಷ್ಠಿಯಲ್ಲಿ ಅವರು ಮಾತನಾಡಿದರು.ಡಾ.ಜಚನಿ ಅವರ ಸಂಸ್ಮರಣೆ ಮಾಡಿದ ವೀರಣ್ಣ, `ಜಚನಿಯವರು (ಜಗದ್ಗುರು ಚನ್ನಬಸವ ದೇಶೀಕೇಂದ್ರ, ನಿಡುಮಾಮಿಡಿ) ಅತ್ಯಲ್ಪ ಕಾಲದಲ್ಲಿಯೇ ಆರು ಸಾವಿರ ವಚನಗಳನ್ನು ರಚಿಸಿ, 360 ಧಾರ್ಮಿಕ ಗ್ರಂಥಗಳನ್ನು ಬರೆದು ದಾಖಲೆ ನಿರ್ಮಿಸಿ ಎಲ್ಲರಿಗೂ ಮಾದರಿಯಾದ ಜೀವನ ನಡೆಸಿದವರು. ಹಿರಿಯರ ಸಂಸ್ಕಾರದಿಂದ ಪಡೆದ ಜ್ಞಾನವನ್ನು ಜನರು ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸಿ, ಮಕ್ಕಳಿಗೆ ಉತ್ತಮ ವಿದ್ಯೆ  ನೀಡಬೇಕು' ಎಂಬ ಸಂದೇಶವನ್ನು ನಮಗೆ ಸಾರಿದವರು' ಎಂದು ಸ್ಮರಿಸಿದರು.`ಜಚನಿಯಂತಹ ಮಹಾನುಭಾವರ ನೆನಪಿನಲ್ಲೇ ನಾವು ಕಳೆದ ಹತ್ತು ವರ್ಷಗಳಿಂದ ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡಲು ಸಾಧ್ಯವಾಗುತ್ತಿದೆ' ಎಂದರು.`ಸಹಕಾರ' ಪತ್ರಿಕೆ ಸಂಪಾದಕ ಪಿ.ರುದ್ರಪ್ಪ ಮಾತನಾಡಿ, `ವಿದ್ಯಾರ್ಜನೆಯ ಗುರಿ ಕೇವಲ ಹಣ ಗಳಿಕೆಯಾಗಬಾರದು. ವಿದ್ಯೆಯಿಂದ ಸಂಸ್ಕಾರ, ವಿನಯವನ್ನು ಪಡೆದರೆ ಸಾರ್ಥಕವಾಗುತ್ತದೆ' ಎಂದರು.ಪುರಸಭಾ ಸದಸ್ಯ ಆರ್.ಸಿ.ಮಂಜುನಾಥ್ ಟ್ರಸ್ಟ್‌ನ ಸೇವಾ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಸನ್ಮಾನ: ಸಿಬಿಎಸ್‌ಸಿ ಪಠ್ಯಕ್ರಮದಲ್ಲಿ 12ನೇ ತರಗತಿಯಲ್ಲಿ ರಾಜ್ಯಕ್ಕೆ ದ್ವೀತಿಯ ರ‌್ಯಾಂಕ್ ಪಡೆದ ಪಟ್ಟಣದ ಡಾ.ಶ್ರಿಧರ್ ಮತ್ತು ಡಾಎನ್.ಮಾಲತಿ ಅವರ ಪುತ್ರಿ ಆರ್.ಸಿಂಧು ಅವರನ್ನು ವೀರಭದ್ರಸ್ವಾಮಿ ಗೋಷ್ಠಿಯ ಅಧ್ಯಕ್ಷ ಸಿ.ಬಸಪ್ಪ ಅಭಿನಂದಿಸಿ, ಸನ್ಮಾನಿಸಿದರು.ಸುಪ್ರಭಾ ಶಿವಕುಮಾರ್ ಪ್ರಾರ್ಥಿಸಿದರು. ಟ್ರಸ್ಟ್‌ನ ಅನಿಲ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಮಲಾಂಬ ಸ್ವಾಗತಿಸಿದರು. ಎ.ಲಿಂಗರಾಜು ನಿರೂಪಿಸಿ, ಯುವ ಕವಿ ಗೋಷ್ಠಿಯ ಕಾರ್ಯದರ್ಶಿ ಮ.ಸುರೇಶ್ ಬಾಬು ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.