ಶುಕ್ರವಾರ, ಮೇ 14, 2021
21 °C

ಜಡೇಜ ಪ್ರದರ್ಶನ: ವೈಟ್ ಮೆಚ್ಚುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶಾಖಪಟ್ಟಣ (ಪಿಟಿಐ): ಚೆನ್ನೈ ಸೂಪರ್ ಕಿಂಗ್ಸ್ ತಂಡದ ರವೀಂದ್ರ ಜಡೇಜ ನೀಡಿದ ಆಲ್‌ರೌಂಡ್ ಪ್ರದರ್ಶನ ಎದುರಾಳಿ ತಂಡದ ನಾಯಕ ಕ್ಯಾಮರೂನ್ ವೈಟ್ ಮೆಚ್ಚುಗೆಗೆ ಪಾತ್ರವಾಗಿದೆ. ಶನಿವಾರ ನಡೆದ ಡೆಕ್ಕನ್ ಚಾರ್ಜರ್ಸ್ ವಿರುದ್ಧದ ಪಂದ್ಯದಲ್ಲಿ ಜಡೇಜ ಅಸಾಮಾನ್ಯ ಪ್ರದರ್ಶನ ನೀಡಿದ್ದರು.ಬ್ಯಾಟಿಂಗ್‌ನಲ್ಲಿ ಮಿಂಚಿ 29 ಎಸೆತಗಳಲ್ಲಿ 48 ರನ್ ಗಳಿಸಿದ್ದ ಅವರು ಬಳಿಕ ಬೌಲಿಂಗ್‌ನಲ್ಲೂ ತಮ್ಮ ಕೈಚಳಕ ತೋರಿ 16 ರನ್‌ಗಳಿಗೆ ಐದು ವಿಕೆಟ್ ಪಡೆದಿದ್ದರು. ಅವರ ಪ್ರದರ್ಶನದ ಬಲದಿಂದ ಪಂದ್ಯದಲ್ಲಿ ಸೂಪರ್ ಕಿಂಗ್ಸ್ 74 ರನ್‌ಗಳ ಗೆಲುವು ಪಡೆದಿತ್ತು. ಮಹೇಂದ್ರ ಸಿಂಗ್ ದೋನಿ ಬಳಗ ನೀಡಿದ್ದ 194 ರನ್‌ಗಳ ಗುರಿ ಬೆನ್ನಟ್ಟಿದ್ದ ಡೆಕ್ಕನ್ ಚಾರ್ಜರ್ಸ್ 17.1 ಓವರ್‌ಗಳಲ್ಲಿ 119 ರನ್‌ಗಳಿಗೆ ಆಲೌಟಾಗಿತ್ತು.`ಜಡೇಜ ನಿಜವಾಗಿಯೂ ಉತ್ತಮವಾಗಿ ಆಡಿದರು. ನಮ್ಮದು ಯುವ ಆಟಗಾರರನ್ನು ಒಳಗೊಂಡ ತಂಡ. ಆದರೆ ಚೆನ್ನೈ ಅತ್ಯುತ್ತಮ ತಂಡ~ ಎಂದು ಚಾರ್ಜರ್ಸ್ ನಾಯಕ ವೈಟ್ ನುಡಿದಿದ್ದಾರೆ. ಜಡೇಜ ಅವರ ಬೌಲಿಂಗ್ ದಾಳಿಯನ್ನು ಎದುರಿಸಿ ನಿಲ್ಲಲು ಈ ತಂಡದ ಯಾವುದೇ ಬ್ಯಾಟ್ಸ್‌ಮನ್‌ಗೂ ಸಾಧ್ಯವಾಗಲಿಲ್ಲ. `ಗರಿಷ್ಠ ಸ್ಕೋರರ್~ ಎನಿಸಿದ್ದ ವೈಟ್ 23 ರನ್ ಕಲೆಹಾಕಿದ್ದರು.ಜಡೇಜ ಇದೇ ವೇಳೆ ತಮ್ಮ ಈ ಪ್ರದರ್ಶನವನ್ನು ಕುಟುಂಬ ಸದಸ್ಯರಿಗೆ ಅರ್ಪಿಸಿದ್ದಾರೆ. `ನಾನು ನಿಜವಾಗಿಯೂ ಸೊಗಸಾದ ಪ್ರದರ್ಶನ ನೀಡಿದ್ದೇನೆ. ನನ್ನ ತಾಯಿ ಹಾಗೂ ಕುಟುಂಬದ ಸದಸ್ಯರಿಗೆ ಇದರ ಶ್ರೇಯ ಸಲ್ಲಬೇಕು~ ಎಂದು ಪಂದ್ಯದ ಬಳಿಕ ಅವರು ಪ್ರತಿಕ್ರಿಯಿಸಿದ್ದಾರೆ.`ಆರಂಭದಲ್ಲಿ ನಾನು ಸ್ಟ್ರೈಕ್ ರೊಟೇಟ್ ಮಾಡುವತ್ತ ಗಮನ ಹರಿಸಿದೆ. ಒಬ್ಬ ಎಡಗೈ ಸ್ಪಿನ್ನರ್ ಬೌಲಿಂಗ್ ಮಾಡಲು ಆಗಮಿಸುವುದನ್ನೇ ಕಾಯುತ್ತಿದ್ದೆ. ಆ ಬಳಿಕ ದೊಡ್ಡ ಹೊಡೆತಗಳಿಗೆ ಮುಂದಾದೆ~ ಎಂದು ಜಡೇಜ ತಮ್ಮ ಯೋಜನೆಯನ್ನು ಬಹಿರಂಗಪಡಿಸಿದರು.`ಟ್ವೆಂಟಿ-20 ಪಂದ್ಯದಲ್ಲಿ ಐದು ವಿಕೆಟ್ ಪಡೆಯುವುದೆಂದರೆ ಸುಲಭದ ವಿಷಯವಲ್ಲ. ನಿಜವಾಗಿಯೂ ಇದು ಅಮೋಘ ಪ್ರದರ್ಶನ. `ಸ್ಟಂಪ್ ಟು ಸ್ಟಂಪ್~ ಬೌಲ್ ಮಾಡುವುದು ನನ್ನ ಉದ್ದೇಶವಾಗಿತ್ತು. ಅದು ಫಲ ನೀಡಿತು~ ಎಂದರು ಹೇಳಿದರು. ಐಪಿಎಲ್ ಹರಾಜಿನಲ್ಲಿ ಜಡೇಜ ಅವರನ್ನು ತನ್ನದಾಗಿಸಿಕೊಳ್ಳಲು ಸೂಪರ್ ಕಿಂಗ್ಸ್ ತಂಡ 9 ಕೋಟಿ ರೂ. ವ್ಯಯಿಸಿತ್ತು.`ಮೊದಲ ಪಂದ್ಯದಲ್ಲಿ ತಂಡದ ಆಟಗಾರರು ಚುರುಕಿನ ಪ್ರದರ್ಶನ ನೀಡಲಿಲ್ಲ. ಆದರೆ ಚಾರ್ಜರ್ಸ್ ವಿರುದ್ಧ ಎಲ್ಲ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕಿಳಿಸಿದೆವು~ ಎಂದು ನಾಯಕ ಮಹೇಂದ್ರ ಸಿಂಗ್ ದೋನಿ ಹೇಳಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.