ಮಂಗಳವಾರ, ಜನವರಿ 28, 2020
22 °C
ಪಂಚರಂಗಿ

ಜತೆಯಾಗಿ ನಟಿಸಲಿರುವ ಶಾರುಖ್-, ಫರ್‍ಹಾನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜತೆಯಾಗಿ ನಟಿಸಲಿರುವ ಶಾರುಖ್-, ಫರ್‍ಹಾನ್‌

ಶಾರುಖ್‌ಖಾನ್‌ ಹಾಗೂ ಫರ್‍ಹಾನ್‌ ಅಖ್ತರ್‌ ಜತೆಯಾಗಿ ನಟಿಸಲಿದ್ದಾರೆ. ಇದಕ್ಕಾಗಿ ವೇದಿಕೆ, ಮುಹೂರ್ತ ಎರಡೂ ಸಿದ್ಧವಾಗಿವೆ. ರಾಹುಲ್‌ ಢೋಲಕಿಯಾ ಅವರ ಮುಂದಿನ ‘ರಯೀಸ್’ ಎಂಬ ಚಿತ್ರದಲ್ಲಿ ಕಾಳಸಂತೆಯಲ್ಲಿ ಕಳ್ಳಭಟ್ಟಿ ಮಾರುವವನ ಪಾತ್ರದಲ್ಲಿ ಶಾರುಖ್ ಹಾಗೂ ಪೊಲೀಸ್‌ ಪಾತ್ರದಲ್ಲಿ ಫರ್‍ಹಾನ್‌ ಅಖ್ತರ್‌ ನಟಿಸುತ್ತಿದ್ದಾರೆ.ಇದೇ ಮೊದಲ ಬಾರಿಗೆ ಫರ್‍ಹಾನ್‌, ಶಾರುಖ್ ಅವರೊಂದಿಗೆ ಅಭಿನಯಿಸುತ್ತಿರುವುದರಿಂದ ಸಹಜವಾಗಿ ಬಾಲಿವುಡ್‌ನಲ್ಲಿ ಕುತೂಹಲ ಹೆಚ್ಚಾಗಿದೆ. ಈ ಹಿಂದೆ  ಶಾರುಖ್‌ ಖಾನ್‌ ಅಭಿಯನದ ‘ಡಾನ್‌ 2’ ಚಿತ್ರಕ್ಕೆ ಫರ್‍ಹಾನ್‌ ಆ್ಯಕ್ಷನ್‌ ಕಟ್‌ ಹೇಳಿದ್ದರು.

ಇದೀಗ ‘ರಯೀಸ್’ ಮೂಲಕ ಇಬ್ಬರೂ ಪರದೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಚಿತ್ರದ ನಿರ್ದೇಶಕ ರಾಹುಲ್‌ ಅವರ ಪ್ರಕಾರ 2015ರ ಈದ್‌ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಕಾಣಲಿದೆಯಂತೆ.

ಪ್ರತಿಕ್ರಿಯಿಸಿ (+)