ಜನಗಣತಿ: ಸಂಪೂರ್ಣ ಯಶಸ್ಸಿಗೆ ಸಲಹೆ

7

ಜನಗಣತಿ: ಸಂಪೂರ್ಣ ಯಶಸ್ಸಿಗೆ ಸಲಹೆ

Published:
Updated:

ರಾಮದುರ್ಗ:  ತಾಲ್ಲೂಕಿನಲ್ಲಿ ನಡೆಯುವ ಜನಗಣತಿ ಕಾರ್ಯದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾದರೆ ತಹಸೀಲ್ದಾರ ಕಾರ್ಯಾಲಯದ ಸಹಾಯವಾಣಿ (08335243149)ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬೇಕು ಎಂದು   ತಹಸೀಲ್ದಾರ ಗೀತಾ ಕೌಲಗಿ ತಿಳಿಸಿದರು.ಗಣತಿದಾರರಿಗೆ ಈಚೆಗೆ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಾಲ್ಲೂಕಿನಲ್ಲಿರುವ ಒಟ್ಟು 115 ಗ್ರಾಮಗಳಲ್ಲಿ ಒಟ್ಟು 381 ಗಣತಿ ಬ್ಲಾಕ್‌ಗಳನ್ನು ಮಾಡಲಾಗಿದೆ. 352 ಜನ ಗಣತಿದಾರರು ಹಾಗೂ 64 ಜನ ಗಣತಿ ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದು ಹೇಳಿದರು.ಗ್ರಾಮೀಣ ಪ್ರದೇಶದಲ್ಲಿ ಜರುಗುವ ಗಣತಿಯಲ್ಲಿ ಆಯಾ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಮತ್ತು ಪಟ್ಟಣ ಪ್ರದೇಶದಲ್ಲಿ ಜರುಗುವ ಗಣತಿಯಲ್ಲಿ ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಸಹಕಾರದಿಂದ  ಶೇ 100 ರಷ್ಟು ಗಣತಿ ಕಾರ್ಯ ಪೂರ್ಣಗೊಳಿಸಬೇಕು ಎಂದು  ವಿನಂತಿಸಿದರು.

ಸ್ಥಾನಿಕ ಜಿಲ್ಲಾಧಿಕಾರಿ ಪಿ. ಎಸ್. ಮಲ್ಲಾಪೂರ ಮಾರ್ಗದರ್ಶನ ನೀಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಎಂ.ಎಂ. ಗೂಳಪ್ಪನವರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry