ಮಂಗಳವಾರ, ಏಪ್ರಿಲ್ 20, 2021
27 °C

ಜನಜಾಗೃತಿಗೆ ಧರ್ಮ, ಧರ್ಮಗುರು ಅವಶ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಜ್ಜಂಪುರ: ಸಕಲ ಜೀವಾತ್ಮರಿಗೂ ಲೇಸನ್ನು ಬಯಸುತ್ತಾ, ಸಮಾಜದಲ್ಲಿ ಎಡವಿದವರನ್ನು ಮೇಲೆತ್ತಿ, ಸರಿದಾರಿಗೆ ತರುವಲ್ಲಿ ಧರ್ಮ ಹಾಗೂ ಧರ್ಮಗುರುಗಳು ಬಹಳ ಹಿಂದಿನಿಂದಲೂ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಶ್ರೀಮದ್ ಉಜ್ಜಯಿನಿ ಸದ್ದರ್ಮ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.ಸಮೀಪದ ಶಿವನಿ ಹೋಬಳಿಯ ಹರಳಹಳ್ಳಿಯಲ್ಲಿ ಶುಕ್ರವಾರ ನಡೆದ  ಕಾಟಂಲಿಂಗೇಶ್ವರ ಸ್ವಾಮಿ ದೇವಾಲಯ ಪ್ರವೇಶ, ಸ್ವಾಮಿಯ ಪುನರ್ ಪ್ರತಿಷ್ಟಾಪನೆ, ಶಿಖರ ಕಲಶಾರೋಹಣ ಮತ್ತು ಜನಜಾಗೃತಿ ಧಾರ್ಮಿಕ ಏಕತಾ ಸಮಾರಂಭದ ಸಾನಿದ್ಯ ವಹಿಸಿ ಅವರು ಮಾತನಾಡಿದರು.ಹಣ್ಣೆ ಮಠದ  ಶಿವಾನಂದ ಶಿವಾಚಾರ್ಯ ಮಾತನಾಡಿ, ದೇವಾಲಯ ನಿರ್ಮಿಸಿ, ಲೋಕಾರ್ಪ ಣೆಗೊಳಿಸಿ, ನಾಡಿನ ಗಮನ ಸೆಳೆಯಲು ಕಾರಣರಾದ  ದಾನಿಗಳು ಹಾಗೂ ಗ್ರಾಮಸ್ಥರಿಗೆ ಧನ್ಯವಾದ ಅರ್ಪಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿ.ಪಂ. ಸದಸ್ಯ ಶಂಬೈನೂರು ಆನಂದಪ್ಪ ಆಚಾರ ವಿಚಾರ, ಧರ್ಮ ಭಕ್ತಿಗಳು ಹಳ್ಳಿಗಳಲ್ಲಿ ಮಾಯವಾಗುತ್ತಿರುವುದಕ್ಕೆ ವಿಶಾದ ವ್ಯಕ್ತಪಡಿಸಿದರು.ಮಾನವ ಸಂಬಂಧಗಳು ವ್ಯಾಪಾರ ಮನೋ ಭಾವನೆಯಿಂದ ದೂರವಾಗಿದ್ದು, ಜಗದ್ಗುರುಗಳು ಜನರಲ್ಲಿ ಪ್ರೀತಿ, ವಿಶ್ವಾಸ ಮೂಡಿಸಿ, ಸಂಬಂದ ಕಟ್ಟುವಲ್ಲಿ ದಾರಿದೀಪವಾಗಬೇಕು ಎಂದು ಪತ್ರಕರ್ತ ಎನ್.ರಾಜು ಹೇಳಿದರು.ಮಾಜಿ ಶಾಸಕ ನೀಲಕಂಠಪ್ಪ ಭಕ್ತಿ ದಾಸೋಹ, ಧರ್ಮ ದಾಸೋಹ ಉಣಬಡಿಸುವ ಮೂಲಕ ಧರ್ಮಗುರುಗಳು ಮಾನವ ಮನುಷ್ಯನಾಗಿ ಜೀವಿಸಲು ಮಾರ್ಗದರ್ಶಿಸಬೇಕು ಎಂದರು.ಹುಲಿಕೆರೆ ದೊಡ್ಡಮಠದ ವಿರೋಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿ, ನಂದೀಪುರದ ಹಿರೇಮಠದ ನಂದೀಶ್ವರ ಶಿವಾಚಾರ್ಯ ಸ್ವಾಮಿ, ತಾವರೆಕೆರೆ ಅಬಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿ, ಚನ್ನ ಗಿರಿಯ ಕೇದಾರನಾಥ ಶಾಂತಲಿಂಗ ಶಿವಾಚಾರ್ಯ ಸ್ವಾಮಿ, ಸಮಾಜ ಸೇವಕ ಎಂ.ಗೋಪಿಕೃಷ್ಣ, ತಾ.ಪಂ.ಅದ್ಯಕ್ಷೆ ದೀಪಾಉಮೇಶ್,ಶಾಸಕ ಡಿ.ಎಸ್ ಸುರೇಶ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.