ಸೋಮವಾರ, ಮೇ 23, 2022
20 °C

ಜನಜಾಗೃತಿಗೆ ಮಾಧ್ಯಮ ಅವಶ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಚಲನಚಿತ್ರ ಮಾಧ್ಯಮ ಅತ್ಯಂತ ಪ್ರಭಾವಶಾಲಿ ಹಾಗೂ ಹೆಚ್ಚು ಕೋಟ್ಯಾಂತರ ಜನರನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ತಲುಪುವ ಮಾಧ್ಯಮ. ಸಮಾಜದ ಪ್ರಸಕ್ತ ಸ್ಥಿತಿಯಲ್ಲಿ ಎದುರಿಸುತ್ತಿರುವ ಸಮಸ್ಯೆ, ಬೆಳವಣಿಗೆಗಳು, ಪಟ್ಟಭದ್ರ ಹಿತಾಸಕ್ತಿಗಳ ಅಟ್ಟಹಾಸ, ಸಾಮ್ರಾಜ್ಯಶಾಹಿ ಧೋರಣೆ ವಿರುದ್ಧ ಜನಜಾಗೃತಿಗೆ ಈ ಚಲನಚಿತ್ರ ಮಾಧ್ಯಮ ಪರಿಣಾಮಕಾರಿ ಬಳಕೆ ಮಾಡಬೇಕಿದೆ ಎಂದು ಸಮಾಜ ಸೇವಕ ಬಸವರಾಜ ಕಳಸ ಹೇಳಿದರು.ಇಲ್ಲಿನ ಪತ್ರಿಕಾ ಭವನದಲ್ಲಿ ಸಮುದಾಯ ಸಂಘಟನೆ ರಾಯಚೂರು ಘಟಕವು ಭಾನುವಾರ ಆಯೋಜಿಸಿದ್ಧ ಚಿತ್ರ ಸಮುದಾಯ ಉದ್ಘಾಟನೆ ಹಾಗೂ ಪ್ರಕಾಶ ಝಾ ಅವರು ನಿರ್ದೇಶಿಸಿ `ಆರಕ್ಷಣ~ ಹಿಂದಿ ಚಲನಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮೂರು ದಶಕಗಳ ಹಿಂದೆಯೇ ಸಮುದಾಯ ಸಂಘಟನೆಯ ಚಿತ್ರ ಸಮುದಾಯ ಇಲ್ಲಿ ಕನ್ನಡ ಚಲನಚಿತ್ರ ಕಾಡು, ಚೋಮನದುಡಿ, ಗರಂ ಹವಾದಂಥ ಅನೇಕ ಚಲನಚಿತ್ರ ಪ್ರದರ್ಶನ ಆಯೋಜಿಸಿತ್ತು. ಸಾಮಾಜಿಕ ಸ್ಥಿತಿಗತಿ, ಪರಿಸರ, ಶಿಕ್ಷಣ ಹೀಗೆ ಅನೇಕ ಸಂಗತಿಗಳ ಬಗ್ಗೆ ಮನವರಿಕೆ ಮಾಡಿಕೊಡುವ ಚಲನಚಿತ್ರಗಳನ್ನು ಕನ್ನಡ ಚಲನಚಿತ್ರ ರಂಗ ಆ ದಿನಗಳಲ್ಲೇ ಕೊಟ್ಟಿತ್ತು ಎಂಬುದು ಹೆಮ್ಮೆಯ ಸಂಗತಿ. ದೇಶದ ಚಲನಚಿತ್ರ ರಂಗವೇ ಆಗ ಕನ್ನಡ ಚಲನಚಿತ್ರ ರಂಗನ್ನು ಬೆರಗಿನಿಂದ ನೋಡಿತ್ತು. ಹಿಂದಿ ಹಾಗೂ ಬೇರೆ ಭಾಷೆಯಲ್ಲಿ ಈ ರೀತಿಯ ಚಲನ ಚಿತ್ರಗಳು ಬಂದಿದ್ದವು ಎಂದು ಹೇಳಿದರು.ಪ್ರಸ್ತುತ ಭೌಗೋಳಿಕ ಪರಿವರ್ತನೆಗೆ ನಮ್ಮನ್ನು ನಾವು ಒಡ್ಡಿಕೊಳ್ಳಬೇಕಿದೆ. ದೇಶಿಯ ಸಂಸ್ಕೃತಿ ಹಾಳಾಗುತ್ತಿದೆ. ಸಾಮ್ರಾಜ್ಯ ಶಾಹಿ ಧೋರಣೆ ತಲೆ ಎತ್ತುತ್ತಿದೆ. ಪಟ್ಟಭದ್ರ ಹಿತಾಸಕ್ತಿ, ದುಡಿಯುವ ವರ್ಗದ ಶೋಷಣೆ ಹೀಗೆ ಅನೇಕ ನಿಟ್ಟಿನಿಂದ ಚಳವಳಿ ಬೆಳೆದು ಬರುತ್ತಿವೆ. ಈ ಸ್ಥಿತಿಯಲ್ಲಿ ಇಂಥ ವಿಚಾರಗಳ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸಲು ಚಲನಚಿತ್ರ ಮಾಧ್ಯಮ ಬಳಕೆ ಅವಶ್ಯ.ಪ್ರಕಾಶ ಝಾ ಸೇರಿದಂತೆ ಅನೇಕ ಪ್ರಖ್ಯಾತ ನಿರ್ದೇಶಕರು ಈ ರೀತಿಯ ಸಿನೆಮಾ ನಿರ್ಮಾಣ ಮಾಡಿದ್ದಾರೆ ಎಂದು ತಿಳಿಸಿದರು.ಸಮುದಾಯ ರಾಯಚೂರು ಘಟಕದ ಅಧ್ಯಕ್ಷ ತಾಯಣ್ಣ ಯರಗೇರಾ ಪ್ರಸ್ತಾವಿಕ ಮಾತನಾಡಿದರು. ಸಮುದಾಯ ಪ್ರಧಾನ ಕಾರ್ಯದರ್ಶಿ ಪ್ರವೀಣರೆಡ್ಡಿ ಗುಂಜಳ್ಳಿ ವೇದಿಕೆಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.