ಬುಧವಾರ, ಸೆಪ್ಟೆಂಬರ್ 18, 2019
21 °C

ಜನಜಾಗೃತಿಯಿಂದ ದೇಶದ ಉಳಿವು

Published:
Updated:

ಅಣ್ಣಿಗೇರಿ: ಅಣ್ಣಾ ಹಜಾರೆ ತಮ್ಮೂರಿಗೆ ತೋರಿಸಿದ ಪ್ರೀತಿಯನ್ನೇ ಪ್ರತಿಯೊಬ್ಬರೂ ತಮ್ಮ ಊರುಗಳಿಗೆ ತೋರಿಸಿದರೆ ಅದೇ ಅಣ್ಣಾಗೆ ಸಲ್ಲಿಸುವ ನಿಜವಾದ ಗೌರವ ಎಂದು ತೋಂಟದ ಸಿದ್ಧಲಿಂಗ ಸ್ವಾಮೀಜಿ ನುಡಿದರು.

ಬಸವ ಕೇಂದ್ರ ಏರ್ಪಡಿಸಿದ್ದ ಶರಣ ಶ್ರಾವಣ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.



ಜನ ಜಾಗೃತಿ ಆಗದಿದ್ದರೆ ದೇಶ ಉಳಿಯಲ್ಲ. ಬಳ್ಳಾರಿ ಜಿಲ್ಲೆಯಲ್ಲಿ ಭೂತಾಯಿ ಒಡಲು ಬಗೆದು ಕಬ್ಬಿಣ ಅದಿರು ಮಾರಲಾಗಿದೆ. ಹಾರೂಬೂದಿಯಿಂದ ಕೊಪ್ಪಳ ಜಿಲ್ಲೆ ನರಕವಾಗಿದೆ. ಹಳ್ಳಿಗುಡಿ ರೈತರ ಹೆಸರಿನಲ್ಲಿ ಗದಗಿನ ಭೂ ಮಾಫಿಯಾ ಕೆಲಸ ಮಾಡುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರದ ದೇಶದ್ರೋಹಿಗಳು ಅಪಚಾರ ಮಾಡುತ್ತಿದ್ದಾರೆ. ಬಸವಣ್ಣನವರ ಆಶಯ, ಅಂಬೇಡ್ಕರ ಸಂವಿಧಾನ ಎಲ್ಲರಿಗೂ ಪರಮೋಚ್ಛ ಎಂದು ನುಡಿದರು.



ಡಾ.ಸುಧಾ ಕೌಜಗೇರಿ ಮುಕ್ತಾಯಕ್ಕನ ಕುರಿತು ಉಪನ್ಯಾಸ ನೀಡಿದರು. ಎಸ್.ಎಸ್. ಹರ್ಲಾಪುರ ಮಾತನಾಡಿದರು. ಹನುಮಂತಪ್ಪ ಡಬರಿ, ಮೃತ್ಯುಂಜಯ ನವಲಗುಂದ, ಎಂ.ಎಸ್. ಪೂಜಾರ ಉಪಸ್ಥಿತರಿದ್ದರು. ಮೃತ್ಯುಂಜಯ ಹಿರೇಮಠ, ಚಂದ್ರಶೇಖರ ಹೊಸಮನಿ ಸಂಗೀತ ನೀಡಿದರು. ಎನ್.ಎಸ್. ಮೇಲ್ಮರಿ ಸ್ವಾಗತಿಸಿದರು. ಸವಿತಾ ಡಬರಿ ನಿರೂಪಿಸಿದರು.

Post Comments (+)