ಶನಿವಾರ, ಜೂನ್ 19, 2021
22 °C
ದೇವದಾಸಿ ಪದ್ಧತಿ

ಜನಜಾಗೃತಿ ಸಮಾವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ತಾಲ್ಲೂಕಿನ ಹಿರೆಸಿಂಧೊೋಗಿ ಗ್ರಾಮದಲ್ಲಿ ಜೀವಂತವಾಗಿರುವ ಅನಿಷ್ಟ ದೇವದಾಸಿ ಪದ್ಧತಿ ನಿರ್ಮೂ­ಲನೆ  ಮಾಡುವ ನಿಟ್ಟಿನಲ್ಲಿ ಪ್ರಗತಿಪರ ಮಠಾ­ಧೀಶರ ನೇತೃತ್ವದಲ್ಲಿ ಜನ­ಜಾಗೃತಿ ಸಮಾವೇಶ ಮಾರ್ಚ್‍ 28ರಂದು ನಡೆಯಲಿದೆ.ದೇವದಾಸಿ ಪದ್ಧತಿ ನಿರ್ಮೂ­ಲನೆಗಾಗಿ ರಾಜ್ಯದ 15 ಜನ ಪ್ರಗತಿಪರ ಮಠಾ­ಧೀಶರು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ನೇತೃತ್ವದಲ್ಲಿ ಹಿರೆ­ಸಿಂಧೋಗಿ­ಯಲ್ಲಿ ಪಾದಯಾತ್ರೆ ಹಾಗೂ ಜನ­ಜಾಗೃತಿ ಸಮಾವೇಶ ನಡೆಸಲಿದ್ದಾರೆ.ಯುಗಾದಿ ಪಾಡ್ಯದಂದು ಹೆಣ್ಣುಮಕ್ಕಳನ್ನು ದೇವದಾಸಿ­ಯರನ್ನಾಗಿ ಮಾಡಲು ಮುತ್ತು ಕಟ್ಟುವ ಪದ್ಧತಿ ಜಾರಿಯಲ್ಲಿರುವ ಬಗ್ಗೆ ‘ಪ್ರಜಾವಾಣಿ’ ವರದಿ ಹಾಗೂ ಮಾರ್ಚ್‍ 14ರ ಸಂಪಾದಕೀಯ ಆಧರಿಸಿ ಈ ಸಮಾವೇಶ ಹಮ್ಮಿ­ಕೊಳ್ಳಲಾಗಿದೆ. ಇದು ಜಿಲ್ಲೆಗೆ ಕಳಂಕ ತರುವ ವಿಷಯವಾಗಿದ್ದು, ಜಿಲ್ಲಾ­ಡಳಿತವು ದೇವದಾಸಿ ಪದ್ಧತಿ ನಿರ್ಮೂ­ಲನೆ­ಗಾಗಿ ಪುನರ್ವಸತಿ ಹಾಗೂ ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳಲು ಸಮಾವೇಶದಲ್ಲಿ ಒತ್ತಾಯಿಸ­ಲಾಗು­ವುದು ಎಂದು ಹೈದರಾಬಾದ್‍ -ಕರ್ನಾ­ಟಕ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಎಚ್.ಎಸ್. ಪಾಟೀಲ್‍,  ಕಾರ್ಯ­ದರ್ಶಿ ಅಲ್ಲಮಪ್ರಭು ಬೆಟ್ಟ­ದೂರು ತಿಳಿಸಿದ್ದಾರೆ. ಜಿಲ್ಲೆಯ ಪ್ರಗತಿಪರ ಸಂಘಟನೆಗಳು ಈ ಸಮಾವೇಶಕ್ಕೆ ಸಹಕರಿಸಿ ಬೆಂಬಲ ವ್ಯಕ್ತ­ಪಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.