ಬುಧವಾರ, ನವೆಂಬರ್ 13, 2019
23 °C

`ಜನತೆಯ ತಾಳ್ಮೆಗೂ ಒಂದು ಮೀತಿ ಇದೆ'

Published:
Updated:

ಶಹಾಪುರ: ತಾಲ್ಲೂಕಿನ ಆಡಳಿತದಲ್ಲಿ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಪಟ್ಟಣದಲ್ಲಿ ಕನಿಷ್ಠ ಕುಡಿಯುವ ನೀರಿನ ಸೌಲಭ್ಯ ಇಲ್ಲವಾಗಿದೆ. ಜನತೆ ತಾಳ್ಮೆಗೂ ಒಂದು ಮಿತಿ ಇದೆ. ದುಷ್ಟ ವ್ಯವಸ್ಥೆಯ ವಿರುದ್ಧ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜನಪರ ಕೆಲಸ ನಿರ್ವಹಿಸುವ ಸೂಕ್ತ ಅಭ್ಯರ್ಥಿಗೆ ಮತ ನೀಡಬೇಕೆಂದು ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ಗುರು ಪಾಟೀಲ್ ಸಿರವಾಳ ಪರ ಅವರ ಸಹೋದರಿ ಗೌರಮ್ಮ ಪಾಟೀಲ್ ಮನವಿ ಮಾಡಿದರು.ಪಟ್ಟಣದ ವಾರ್ಡ್‌ಸಂಖ್ಯೆ 12ರಲ್ಲಿ ಭಾನುವಾರ ಕೆಜೆಪಿ ಅಭ್ಯರ್ಥಿ ಪರ ಮತಯಾಚಿಸುತ್ತಾ ಮತನಾಡಿದರ ಅವರು. ಪ್ರತಿ ಐದು ವರ್ಷಕ್ಕೆ ಒಮ್ಮೆ ಚುನಾವಣೆ ಸಂದರ್ಭದಲ್ಲಿ ಆಗಮಿಸಿ ಮತದಾರರಿಗೆ ಇನ್ನಿಲ್ಲದ ಹುಸಿ ಭರವಸೆ ನೀಡಿ ಮಾಯವಾಗುವ ವ್ಯಕ್ತಿಗಳ ಬಗ್ಗೆ ನಾವು ಎಚ್ಚರವಿರಬೇಕು. ಕಳೆದ ಚುನಾವಣೆಯಲ್ಲಿ ಮತಯಾಚನೆ ಸಂದರ್ಭದಲ್ಲಿ ಜನಪ್ರತಿನಿಧಿಗಳು ನೀಡಿದ ಭರವಸೆ ಏನಾಯಿತು. ಮುಖಂಡರ ಈಗ ಮತ್ತೆ ನಿಮ್ಮ ಮುಂದೆ ಮತಯಾಚನೆಗೆ ಬಂದಿದ್ದಾರೆ.ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿದ ಅಭ್ಯರ್ಥಿಗೆ ಮತಬೇಡ. ಕೊಟ್ಟ ಭಾಷೆಯನ್ನು ಮರೆತುಬಿಟ್ಟವರಿಗೆ ಶಾಶ್ವತವಾಗಿ ಮನೆಗೆ ಕಳುಹಿಸಿ ಅವರು ಕರೆ ನೀಡಿದರು.ಒಂದು ದಶಕದ ಸ್ಥಳೀಯ ಆಡಳಿತ ವ್ಯವಸ್ಥೆಯು ಜನತೆಗೆ ನಿರಾಸೆ ಮೂಡಿಸಿದೆ. ಬದಲಾವಣೆ ಗಾಳಿ ಬೀಸುತ್ತಲಿದೆ. ಗ್ರಾಮೀಣ ಪ್ರದೇಶದ ಹಳ್ಳಿಗಳಲ್ಲಿ ಕನಿಷ್ಠ ಸೌಲಭ್ಯಗಳಿಲ್ಲದೆ ಜನತೆ ತತ್ತರಿಸಿ ಹೋಗಿದ್ದಾರೆ. ಅಧಿಕಾರದ ಅವಧಿಯಲ್ಲಿ ಕೆಲಸ ನಿರ್ವಹಿಸದ ಜನಪ್ರತಿನಿಧಿಗಳು ಮತದಾರರ ಓಲೈಕೆಗಾಗಿ ತರಾತುರಿಯಲ್ಲಿ ರಸ್ತೆ, ನಿರ್ಮಾಣ, ಕುಡಿಯುವ ನೀರು ಮುಂತಾದ ಕಾಮಗಾರಿ ನಿರ್ವಹಿಸುತ್ತಿರುವುದು ದಿನಾಲು ಮಾಧ್ಯಮದಲ್ಲಿ ವರದಿಯಾಗುತ್ತಲಿದೆ.

ನೀತಿ ಸಂಹಿತೆಯನ್ನು ಉಲ್ಲಂಘಿ ಸುವ ಹಾಗೂ ಕಾನೂನು ಭಯವನ್ನು ಮೂಡಿಸುವುದು ಅಗತ್ಯವಾಗಿದೆ. ಚುನಾವಣೆಯಲ್ಲಿ ಇಂತಹ ಗಿಮಿಕ್ ಮಾಡುವ ಅಭ್ಯರ್ಥಿಗಳಿಗೆ ಸೂಕ್ತ ಉತ್ತರ ನೀಡಬೇಕೆಂದು ಅವರು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಮೀನಾಕ್ಷಿ ಪಾಟೀಲ್, ದ್ರಾಕ್ಷಾಯಿಣಮ್ಮ, ರೇಣುಕಾ, ಮಂಜುಳಾ, ಜ್ಯೋತಿ ಮತ್ತಿರರು ಮತಯಾಚನೆ ಸಂದರ್ಭದಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)