ಶನಿವಾರ, ಮೇ 28, 2022
27 °C

`ಜನಪದ: ಇನ್ನಷ್ಟು ಸಂಶೋಧನೆ ಅಗತ್ಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ಜನಪದ ವಿಸ್ತಾರ ತಿಳಿದುಕೊಳ್ಳಲು ಇನ್ನಷ್ಟು ಸಂಶೋಧನೆಗಳು ನಡೆಯಬೇಕು' ಎಂದು ವಿಶ್ರಾಂತ ಕುಲಪತಿ ಪ್ರೊ. ಎಚ್.ಜೆ. ಲಕ್ಕಪ್ಪಗೌಡ ಕರೆ ನೀಡಿದರು.ನಗರದ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ವಿಶೇಷ ನೆರವು (ಎಸ್‌ಎಪಿ) ಯೋಜನೆಯಡಿ ಶನಿವಾರ ಏರ್ಪಡಿಸಿದ್ದ `ಜನಪದ ಕಾರ್ಯಾಗಾರ' ಉದ್ಘಾಟಿಸಿ ಅವರು ಮಾತನಾಡಿದರು.`ಜನಪದ ನಮ್ಮ ಬದುಕನ್ನು ಪ್ರತಿಬಿಂಬಿಸುತ್ತವೆ. ಈ ನಿಟ್ಟಿನಲ್ಲಿ ಜನಪದದ ಆಳ ಎತ್ತರ ಕಂಡುಕೊಳ್ಳಬೇಕು. ಜನಪದ ವಿದ್ಯಾರ್ಥಿಗಳು ಸ್ವಂತವಾಗಿ ಸಂಶೋಧನೆ ಕೈಗೊಳ್ಳ ಬೇಕು. ನಮ್ಮ ಹಾಗೂ ಜನಪದದ ನಡುವೆ ತಾಯಿ -ಮಕ್ಕಳ ಸಂಬಂಧ ಇದೆ ಎಂದರು.ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ನೀಲಗಿರಿ ಎಂ. ತಳವಾರ ಅಧ್ಯಕ್ಷತೆ ವಹಿಸಿ ಮಾತನಾಡಿ, `ವಿದೇಶಿಗರು ನಮ್ಮ ದೇಶಕ್ಕೆ ಬಾರದೆ ಇದ್ದಿದ್ದರೆ ಶಿಲಾ ಶಾಸನಗಳ ಮೌಲ್ಯ ಗೊತ್ತಾಗುತ್ತಲೇ ಇರಲಿಲ್ಲ.ಬಟ್ಟೆ ತೊಳೆಯಲು, ದನ-ಕರುಗಳನ್ನು ಕಟ್ಟಲು ನಮ್ಮವರು ಶಾಸನಗಳನ್ನು ಬಳಸುತ್ತಿದ್ದಾರೆ. ಜನಪದ ಸಾಹಿತ್ಯವನ್ನು ನವೋದಯ ಸಾಹಿತಿಗಳು ಅರ್ಥ ಮಾಡಿಕೊಂಡರು. ದ.ರಾ. ಬೇಂದ್ರೆ ಅವರು ಸಾಹಿತ್ಯದಲ್ಲಿ ಜನಪದ ಬಳಸಿದರು. ಜನಪದ ಮಡಿವಂತಿಕೆ ಬಿಟ್ಟಿಲ್ಲ' ಎಂದು ಹೇಳಿದರು.ಎಸ್‌ಎಪಿ ಯೋಜನೆ ಸಂಯೋಜಕ ಪ್ರೊ.ಕೆ.ಎಸ್. ಗಂಗಾನಾಯಕ್, ಉಪ ಸಂಯೋಜಕ ಡಾ.ಎಂ. ನಂಜಯ್ಯ ಹೊಂಗನೂರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.