ಸೋಮವಾರ, ಆಗಸ್ಟ್ 19, 2019
28 °C

`ಜನಪದ ನಾಯಕ ಡಾ. ರಾಜಕುಮಾರ್...' ಅನಾವರಣ

Published:
Updated:

ಕನ್ನಡ ಜನಶಕ್ತಿ ಕೇಂದ್ರ: ಶ್ರೀಕೃಷ್ಣರಾಜ ಪರಿಷನ್ಮಂದಿರ, ಚಾಮರಾಜಪೇಟೆ. ಶನಿವಾರ ಡಾ.ಕೆ. ಮರುಳಸಿದ್ದಪ್ಪ ಅವರಿಂದ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅವರ `ಜನಪದ ನಾಯಕ ಡಾ. ರಾಜಕುಮಾರ್ ಜನರಿಗೆ ಕೊಟ್ಟಿದ್ದೇನು?' ಕೃತಿ ಲೋಕಾರ್ಪಣೆ.ಡಾ. ರಾಜಕುಮಾರ್ ಅವರು ಸಿನಿಮಾದೊಳಗಿದ್ದು, ಸಿನಿಮಾವನ್ನು ಮೀರಿದ ಸಾಂಸ್ಕೃತಿಕ ವ್ಯಕ್ತಿತ್ವ ರೂಪಿಸಿಕೊಂಡು ಬದುಕಿದವರು. ಸ್ವಂತ ಸಾಮರ್ಥ್ಯದಿಂದಲೇ ಎತ್ತರಕ್ಕೇರಿದ ಅವರು ಸಾಮಾಜಿಕವಾಗಿಯೂ ಸಾಧಕರೆನಿಸಿದ್ದಾರೆ. ಹಳ್ಳಿಯಿಂದ ಬಂದ ಸಾಮಾನ್ಯ ಮನುಷ್ಯ ಶ್ರದ್ಧೆ ಮತ್ತು ಸಂಕಲ್ಪದಿಂದ ಹೇಗೆ ಸಾಧನೆ ಮಾಡಬಹುದೆಂಬುದನ್ನು ತೋರಿಸಿದವರು. ರಾಜ್ ಅವರ ವ್ಯಕ್ತಿತ್ವದ ವಿಶ್ವೇಷಣೆಯ ಜೊತೆಗೆ ಅವರ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕೊಡುಗೆಯನ್ನು ಸಾದರಪಡಿಸುವ ಮೂರು ಲೇಖನಗಳು ಈ ಪುಸಕ್ತದಲ್ಲಿವೆ. ಅಧ್ಯಕ್ಷತೆ: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ. ಅತಿಥಿಗಳು: ರಾಘವೇಂದ್ರ ರಾಜಕುಮಾರ್, ಸತ್ಯಮೂರ್ತಿ ಆನಂದೂರು, ಕೆ. ಮೋಹನರಾವ್, ಸಿ.ಕೆ. ರಾಮೇಗೌಡ. ಸಂಜೆ 5.30.

Post Comments (+)