ಜನಪದ ಹಾಡುಗಳಿಗೆ ಸಾವಿಲ್ಲ: ಜಗಜಂಪಿ

7

ಜನಪದ ಹಾಡುಗಳಿಗೆ ಸಾವಿಲ್ಲ: ಜಗಜಂಪಿ

Published:
Updated:

ಬಸವನಬಾಗೇವಾಡಿ: `ಹೆಸರಿಲ್ಲದವರ, ಹೆಸರೊಲ್ಲದವರ, ಹೇಳ ಹೆಸರಿಲ್ಲದವರಂತೆ  ಆಗಿ ಹೋದವರ, ಸಾವು ಇರದ ಹಾಡುಗಳು ಜನಪದ ಹಾಡುಗಳು~ ಎಂದು ಬೆಳಗಾವಿ ಲಿಂಗರಾಜ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ಬಸವರಾಜ ಜಗಜಂಪಿ ಹೇಳಿದರು.ಪಟ್ಟಣದ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಸಹಯೋಗದಲ್ಲಿ  ಕನ್ನಡ ಜಾನಪದ ಸಂವರ್ಧನೆ ಮತ್ತು ಸಂರಕ್ಷಣೆ ಕುರಿತು ಭಾನುವಾರ ಹಮ್ಮಿಕೊಂಡಿದ್ದ  ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಜನಪದರು ವಿಶ್ವವಿದ್ಯಾಲಯ ಕಟ್ಟೆ ಹತ್ತಿದವರಲ್ಲ. ಅವರು ರಚನೆ ಮಾಡಿದ ಸಾಹಿತ್ಯ ವಿಶ್ವವಿದ್ಯಾಲಯ ಕಟ್ಟೆ ಹತ್ತಿ ದೊಡ್ಡ ದೊಡ್ಡ ವಿದ್ವಾಂಸರನ್ನು ಸೃಷ್ಟಿಸಿದೆ. ಜಾನಪದ ಸಾಹಿತ್ಯವು ಜನಜೀವನದ ಪ್ರತಿಬಿಂಬವಾಗಿದೆ. ಸಾಹಿತ್ಯದ ಮೂಲ ಬೇರು ಜಾನಪದ ಸಾಹಿತ್ಯವಾಗಿದೆ. ಆದರೆ ಜಾಗತೀಕರಣದ ಬೆನ್ನು ಹತ್ತಿರುವ ನಮಗೆ ಪಂಪ, ರನ್ನನನ್ನು ಕಲಿಸುವುದು ಕಠಿಣವಾಗಿದೆ. ಹೀಗಾಗಿ ಜಾನಪದ ವಿಷಯದ ಬಗ್ಗೆ ಗಂಭೀರವಾಗಿ ಚರ್ಚಿಸುವ ಅಗತ್ಯವಿದೆ ಎಂದು ಹೇಳಿದರು.ಇಂದು ಕೆಲ ಸಾರಿಗೆ ವಾಹನಗಳಲ್ಲಿ ಕೇಳಿಬರುತ್ತಿರುವ ಹಾಡುಗಳು ಜನಪದ ಹಾಡುಗಳಲ್ಲ. ಅವುಗಳು ಕೋಟಾ ಹಾಡುಗಳಾಗಿವೆ. ಅವುಗಳನ್ನು ಅಳಿಸಿಹಾಕಿ ಮೂಲ ಜನಪದ ಹಾಡುಗಳನ್ನು ಉಳಿಸಿ ಬೆಳೆಸಬೇಕಾದ ಅವಶ್ಯಕತೆ ಇದೆ. ಇಂದು ಯಕ್ಷಗಾನ ಜಾಗತಿಕ ಮಟ್ಟದಲ್ಲಿ ಹೆಸರು ಪಡೆದಿದೆ.ಅಲ್ಲಿಯ ಜನರ ಇಚ್ಚಾಶಕ್ತಿ ಮತ್ತು ಪರಿಶ್ರಮದಿಂದಾಗಿ ಅದನ್ನು ಉಳಿಸಿ ಬೆಳೆಸಲಾಗಿದೆ. ಉತ್ತರ ಕರ್ನಾಟಕದಲ್ಲಿರುವ ಜಾನಪದ ಉಳಿಸಲು ಪ್ರತಿಯೊಬ್ಬರು ಇಚ್ಚಾಶಕ್ತಿ ಹೊಂದಬೇಕು. ಗರತಿಯ ಹಾಡುಗಳು ನೋವು ನಲಿವು, ಶ್ರಮ ಮರೆಯಲು ಶ್ರಷ್ಠಿಯಾದಂತವುಗಳು. ಅವುಗಳ ಸಂರಕ್ಷಣೆ ನಡೆದರು ಸಂವರ್ಧನೆ ಯಾಗದೇ ಇರುವುದು ವಿಷಾದನೀಯ ಎಂದರು.ಪ್ರಪಂಚದಲ್ಲಿಯೇ ಮೊಟ್ಟ ಮೊದಲ ಜಾನಪದ ವಿಶ್ವವಿದ್ಯಾಲಯ ಕರ್ನಾಟಕ ದಲ್ಲಿ ಆರಂಭವಾಗುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ವಿಶ್ವವಿದ್ಯಾಲಯದಿಂದಲೇ ಜಾನಪದ ಉಳಿಯುತ್ತದೆ ಎಂದು ತಿಳಿಯದೇ ನಮ್ಮ ಹಿರಿಯರ ಹೃದಯದಿಂದ ಬಂದ ಜಾನಪದವನ್ನು ನಾವು ನಮ್ಮ ಹೃದಯದಲ್ಲಿ ಇಟ್ಟುಕೊಳ್ಳುವ ಪ್ರಯತ್ನ ಮಾಡಬೇಕು. ಕೊನೆಗೆ ನಮ್ಮ ಮೊಬೈಲನ ರಿಂಗ್‌ಟೋನಿನಲ್ಲಾರ ಇಟ್ಟುಕೊಳ್ಳಿ ಎಂದು ಮಾರ್ಮಿಕವಾಗಿ ನುಡಿದರು. ಗುಲ್ಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ ಡಾ.ಡಿ.ಬಿ. ನಾಯಕ, ಉತ್ತರ ಕರ್ನಾಟ ಕದಲ್ಲಿ ಜಾನಪದದ ಶ್ರೀಮಂತಿಕೆ ಇದೆ. ಆಧುನಿಕತೆಗೆ ಮಾರುಹೋಗಿ ಅವುಗಳಿಗೆ ಮಹತ್ವ ಕೊಡುತ್ತಿಲ್ಲ. ಜನಪದ ಕಲೆ ಉಳಿಸುವು ದರೊಂದಿಗೆ. ಜನಪದ ವಸ್ತು ಗಳನ್ನು ಉಳಿಸಬೇಕಾಗಿದೆ. ಶಿಕ್ಷಕರು ಜನಪದ ವಿಷಯದ ಕಲಿಕೆಯೊಂದಿಗೆ ಇಂತಹ ಕೆಲಸಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಬೇಕು ಎಂದರು.ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ಡಾ.ಬಸವರಾಜ ಪೊಲೀಸ್ ಪಾಟೀಲ, ಅಧ್ಯಕ್ಷತೆ ವಹಿಸಿದ್ದ ಬಿಎಲ್‌ಡಿಇ ಸಂಸ್ಥೆಯ ಆಡಳಿತ ಅಧಿಕಾರಿ ಪ್ರೊ.ಎಸ್.ಎಚ್. ಲಗಳಿ ಮಾತನಾಡಿದರು.ಜಾನಪದ ಅಕಾಡೆಮಿ ಸದಸ್ಯ ಬಿ.ಎಂ. ಭಜಂತ್ರಿ, ಪ್ರಾಚಾರ್ಯ  ಸಿ.ಜಿ. ಸಜ್ಜನರ, ಪ್ರೊ.ಬಿ.ಬಿ. ಡೆಂಗನವರ ವೇದಿಕೆಯಲ್ಲಿದ್ದರು.ಪ್ರಾಚಾರ್ಯ ಸಿ.ಜಿ.ಸಜ್ಜನರ ಸ್ವಾಗತಿಸಿದರು. ಪ್ರೊ. ಎಂ.ಪಿ. ನೀಲಕಂಠಮಠ ನಿರೂಪಿಸಿದರು. ಪ್ರೊ.ಪಿ.ಎಲ್. ಹಿರೇಮಠ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry