ಶುಕ್ರವಾರ, ಮೇ 14, 2021
25 °C

ಜನಪರ ಬಜೆಟ್ ನೀತಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ರಾಜ್ಯ ಬಜೆಟ್‌ನ ಜನವಿರೋಧಿ ಅಂಶಗಳನ್ನು ಕೈಬಿಟ್ಟು ಜನಪರ ನೀತಿ ಜಾರಿಗೊಳಿಸುವಂತೆ ಆಗ್ರಹಿಸಿ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಭಾರತ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಯಿತು.ರಾಜ್ಯ ಬಿಜೆಪಿ ಸರ್ಕಾರದ 4ನೇ ಬಜೆಟ್ ಜನವಿರೋಧಿಯಾಗಿದ್ದು, ಸಾಮಾನ್ಯ ಜನರ ಹಿತ ಕಡೆಗಣಿಸಿದೆ ಎಂದು ದೂರಿದ ಪ್ರತಿಭಟನಾನಿರತರು, ಕೃಷಿ ಮತ್ತು ಕೃಷಿಯಾಧಾರಿತ ಕೈಗಾರಿಕೆಗಳು ಸೊರಗುತ್ತಿವೆ. ಬಜೆಟ್‌ನಲ್ಲಿ ನೀಡಿದ ಸಾಲ ಇತ್ಯಾದಿ ಹಣ ಉಳ್ಳವರ ಪಾಲಾಗುತ್ತಿದೆ.  ಆರ್ಥಿಕ ಬೆಳವಣಿಗೆಯಾಗುತ್ತಿಲ್ಲ.ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಗ್ರಾಮೀಣ ಜನ ಗುಳೆ ಹೋಗುತ್ತಿದ್ದಾರೆ. ಇದನ್ನು ತಡೆಯುವಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ. ಬೆಳೆ ಹಾನಿ ಸಂಭವಿಸಿದಾಗ ರೈತರಿಗೆ ಸೂಕ್ತ ಪರಿಹಾರ ದೊರಕುತ್ತಿಲ್ಲ ಎಂದು ಆರೋಪಿಸಿದರು.ಪಡಿತರ ಕಾರ್ಡ್ ಪಡೆಯುವಲ್ಲಿನ ಆದಾಯ ಮಿತಿಯನ್ನು ರೂ 30 ಸಾವಿರಕ್ಕೆ ಹೆಚ್ಚಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಒದಗಿಸಬೇಕು. ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಮಾಡಬೇಕು ಎಂದು ಅವರು ಒತ್ತಾಯಿಸಿದರು.ಗ್ರಾಮ ಪಂಚಾಯ್ತಿಗಳಿಗೆ ರೂ 9ರಿಂದ 15 ಲಕ್ಷದವರೆಗೆ ಅನುದಾನ ನೀಡಬೇಕು. ನಿರುದ್ಯೋಗಿಗಳಿಗೆ ಮಾಸಿಕ ರೂ 1,500 ಭತ್ಯೆ ನೀಡಬೇಕು. ಸರ್ಕಾರಿ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿಮಾಡಬೇಕು. ಸರ್ಕಾರ ಸಾಲ ಪಡೆಯುವಲ್ಲಿ ಆಸಕ್ತಿ ತೋರುತ್ತಿದ್ದು, ಜನಿಸುವ ಪ್ರತಿ ಮಗುವಿನ ಮೇಲೆ ರೂ  21 ಸಾವಿರ ಸಾಲದ ಹೊರೆಯನ್ನು ಹೊರಿಸಲು ಮುಂದಾಗಿರುವ ನೀತಿಗಳು ಸಲ್ಲದು. ಹೀಗಾಗಿ, ಸರ್ಕಾರ ಸಾರ್ವಜನಿಕರ ಹಿತ ಕಾಯಲು ಬಜೆಟ್‌ನಲ್ಲಿ ಜನಪರ ಅಂಶ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ. ಲಕ್ಷ್ಮೀ ನಾರಾಯಣಭಟ್, ಸ್ಥಳೀಯ ಸಮಿತಿ ಕಾರ್ಯದರ್ಶಿ ಇ. ಶ್ರೀನಿವಾಸ್, ಓಬಳೇಶ್, ವೆಂಕಟೇಶ್, ಅಂಜನಪ್ಪ, ಪೀರ‌್ಯಾನಾಯ್ಕ, ಶ್ರೀನಿವಾಸಮೂರ್ತಿ, ರೇಣುಕಮ್ಮ, ದೇವೇಂದ್ರಪ್ಪ, ವಿನಯಕುಮಾರ, ಪರಶುರಾಮ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.