ಬುಧವಾರ, ಮಾರ್ಚ್ 3, 2021
31 °C

ಜನಪರ ಯೋಜನೆಗಳೇ ಕಾಂಗ್ರೆಸ್ ಆಸರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನಪರ ಯೋಜನೆಗಳೇ ಕಾಂಗ್ರೆಸ್ ಆಸರೆ

ತಿಪಟೂರು: ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳೇ ಮುಂಬರುವ ಲೋಕ­ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಆಸರೆಯಾಗಲಿವೆ ಎಂದು ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಮುದ್ದ­ಹನುಮೇಗೌಡ ತಿಳಿಸಿದರು.ತಾಲ್ಲೂಕು ಕಾಂಗ್ರೆಸ್ ಹಾಲ್ಕುರಿಕೆ­ಯಿಂದ ನಗರದವರೆಗೆ ಮಂಗಳವಾರ ಹಮ್ಮಿಕೊಂಡಿದ್ದ ಭಾರತ ನಿರ್ಮಾಣ ಯಾತ್ರೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.ಶಾಸಕ ಕೆ.ಷಡಕ್ಷರಿ ಮಾತನಾಡಿ, ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರ್ಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಬಿ.ಪರಮಶಿವಯ್ಯ, ನಗರ ಘಟಕದ ಅಧ್ಯಕ್ಷ ಸಿ.ಬಿ.ಶಶಿಧರ್, ಪುರಸಭೆ ಮಾಜಿ ಅಧ್ಯಕ್ಷ ಟಿ.ಎಸ್. ಶಿವಪ್ರಸಾದ್, ಅಣ್ಣಯ್ಯ, ಎ.ಪಿ.ಎಂ.ಸಿ ಸದಸ್ಯರಾದ ರವಿಕುಮಾರ್, ಸುರೇಶ್, ತಾ.ಪಂ. ಮಾಜಿ ಅಧ್ಯಕ್ಷ ವೆಂಕಟೇಶಯ್ಯ, ಎ.ಪಿ­ಎಂಸಿ ಮಾಜಿ ಅಧ್ಯಕ್ಷ ಸಂಗಮೇಶ್, ಚಿಕ್ಕಣ್ಣ, ಶಂಕರಪ್ಪ, ನಗರಸಭಾ ಸದಸ್ಯ­ರಾದ ಪ್ರಕಾಶ್, ಲಿಂಗರಾಜು, ಗ್ರಾ.ಪಂ ಮಾಜಿ ಅಧ್ಯಕ್ಷ ಅಶ್ವಥ್ಕುಮಾರ್ ಮತ್ತಿತರು ಭಾಗವಹಿಸಿದ್ದರು.ಪ್ರತಿಭಟನೆ: ಹಾಲ್ಕುರಿಕೆಯಿಂದ ಹೊರಟ ಪಾದಯಾತ್ರೆಯಲ್ಲಿ ಮೈಕ್ ಕಟ್ಟಿದ ಪ್ರಚಾರ ವಾಹನವೊಂದು ಮುಂದೆ ಸಾಗುತ್ತಿತ್ತು. ವಾಹನದ ಸುತ್ತ ಕಾಂಗ್ರೆಸ್ ಮುಖಂಡರ ಛಾಯಾಚಿತ್ರ­ಗಳ ಫ್ಲೆಕ್ಸ್ ಕಟ್ಟಲಾಗಿತ್ತು. ಪಾದಯಾತ್ರೆ ಮೂರು ಕಿ.ಮೀ. ದಾಟಿದ ನಂತರ ಎದುರು ಬಂದ ಎಎಸ್ಪಿ ಕಾರ್ತಿಕ್ ರೆಡ್ಡಿ ಮೈಕ್ ಕಟ್ಟಿದ್ದ ವಾಹನದ ಬಗ್ಗೆ ಪ್ರಶ್ನಿಸಿದರು. ಅನುಮತಿ ಪಡೆಯದೆ ಫ್ಲೆಕ್ಸ್ ಕಟ್ಟಿದ್ದನ್ನು ಆಕ್ಷೇಪಿಸಿದ ಅವರು ವಾಹನ ವಶಕ್ಕೆ ಪಡೆದರು. ನಂತರ ಮೈಕ್ ಇಲ್ಲದೆ ಯಾತ್ರೆ ಮುಂದುವರಿಯಿತು.ಯಾತ್ರೆ ಸುಮಾರು ಆರು ಕಿ.ಮೀ. ದಾಟಿದ ನಂತರ ಫ್ಲೈಯಿಂಗ್ ಸ್ಕ್ವಾರ್ಡ್ ಅಧಿಕಾರಿ ಎಲ್ಲವನ್ನೂ ನಿಗಾ ವಹಿಸಿ ಗಮನಿಸುತ್ತಿದ್ದರು.

ಅದೇ ಸಮಯಕ್ಕೆ ಎದುರಿನಿಂದ ಬಿಜೆಪಿ ಮುಖಂಡರೊಬ್ಬರ ಕಾರು ಕಮಲದ ಗುರುತು ಹಾಕಿಕೊಂಡು ಸಾಗಿತು. ಇದನ್ನು ನೋಡಿದ ಪಾದಯಾತ್ರೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು `ಆ ವಾಹನ ಯಾಕೆ ಬಿಟ್ಟಿದ್ದು’ ಎಂದು ಸ್ಕ್ವಾರ್ಡ್ ಅಧಿಕಾರಿಯನ್ನು ಪ್ರಶ್ನಿಸಿದರು.ಅಧಿಕಾರಿ ಬೆನ್ನಟ್ಟಿ ಹೋಗಿ ಆ ವಾಹನವನ್ನೂ ಹಿಡಿದು ತಹಶೀಲ್ದಾರರಿಗೆ ಮಾಹಿತಿ ನೀಡಿದರು. ಅವರ ಸೂಚನೆಯಂತೆ ವಿಡಿಯೋ ಮಾಡಿಕೊಂಡು ವಾಹನ ಬಿಟ್ಟರು.ಇದನ್ನು ಪ್ರಶ್ನಿಸಿದ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಯಲ್ಲೇ ಪ್ರತಿಭಟನೆ ಕೂತರು. ತಾರತಮ್ಯ ಮಾಡದೆ ಆ ವಾಹನವನ್ನೂ ವಶ ಪಡಿಸಿಕೊಳ್ಳಬೇಕು ಎಂದು ಪಟ್ಟು ಹಿಡಿದರು.ನಂತರ ಉಪ ವಿಭಾಗಾಧಿಕಾರಿ ಸಿಂಧು, ಎಎಸ್ಪಿ ಕಾರ್ತಿಕರೆಡ್ಡಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾನಿರತರ ಮನವೊಲಿಸಿದರು. ಪಾದಯಾತ್ರೆ ತಿಪಟೂರಿನಲ್ಲಿ ಕೊನೆಗೊಂಡಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.