ಜನಪ್ರತಿನಿಧಿಗಳು ಎಲ್ಲರೂ ಭ್ರಷ್ಟರೇ?

7

ಜನಪ್ರತಿನಿಧಿಗಳು ಎಲ್ಲರೂ ಭ್ರಷ್ಟರೇ?

Published:
Updated:

ಜೈಲಿನಲ್ಲಿ ಇದ್ದವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಅದರಿಂದ ಪಾರಾಗಲು ಜನಪ್ರತಿನಿಧಿ ಮಸೂದೆಗೆ ತಿದ್ದುಪಡಿ ತರುವ ಮೂಲಕ ಚುನಾವಣೆಗೆ ನಿಲ್ಲಲು ಅರ್ಹತೆ ಗಳಿಸಿಕೊಳ್ಳುತ್ತಿರುವುದನ್ನು ಅವಲೋಕಿಸಿದರೆ, `ಜನಪ್ರತಿನಿಧಿಗಳಾದ ನಾವೆಲ್ಲರೂ ಭ್ರಷ್ಟರು, ಇಂದಲ್ಲ, ನಾಳೆ ನಾವೆಲ್ಲರೂ ಜೈಲು ಸೇರುತ್ತೇವೆ, ಮುಂದೆ ಚುನಾವಣೆಗೆ ನಿಲ್ಲಲು ಅನರ್ಹರಾಗುತ್ತೇವೆ' ಎಂಬ ಭೀತಿ ಅವರಲ್ಲಿದೆ ಎಂಬುದನ್ನು ಸಾಬೀತುಪಡಿಸಿದಂತಿದೆ ಸಂಸದರ ನಡವಳಿಕೆ.ಹಿಂದೆ ಸ್ವಾತಂತ್ರ್ಯಕ್ಕಾಗಿ, ನ್ಯಾಯಕ್ಕಾಗಿ,ಜನಸಾಮಾನ್ಯರ ಹಕ್ಕಿಗಾಗಿ ಹೋರಾಟ ಮಾಡಿ ಜೈಲು ಸೇರುತ್ತಿದ್ದರು. ಆಗ ಜೈಲಿನಲ್ಲಿದ್ದು ಚುನಾವಣೆಗೆ ಸ್ಪರ್ಧಿಸುತ್ತ್ದ್ದಿದುದು ನ್ಯಾಯಸಮ್ಮತವಾಗಿತ್ತು. ಈಗ ತನಗಾಗಿ, ತನ್ನ ಪರಿವಾರದವರಿಗಾಗಿ ಹಗರಣಗಳನ್ನೇ ಮೈತುಂಬಿಕೊಂಡು ಅದರಲ್ಲಿಯೇ ಮುಳುಗಿ ಜೈಲು ಸೇರುತ್ತಿದ್ದಾರೆ.ಇಂತಹವರು ಚುನಾವಣೆಗೆ ಸ್ಪರ್ಧಿಸಲು ಅನುವಾಗಿಸುವ ತಿದ್ದುಪಡಿಗೆ ಶಾಸಕಾಂಗ ಒಪ್ಪಿಗೆ ನೀಡಿರುವುದು ವಿಷಾದನೀಯ.

-ಚಂಪು , ಬೆಂಗಳೂರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry